‘ವಕ್ಫ್ ತಂಟೆಗೆ ಬಂದ್ರೆ ಮುಸ್ಲಿಂ ಸಮಾಜ ನಿಮ್ಮನ್ನು ಮುಗಿಸುತ್ತೆ’ ಎಂದಿದ್ದ ಮುಖಂಡನ ವಿರುದ್ದ ಎಫ್ ಐಆರ್ ಕೊಪ್ಪಳ,ಸೆಪ್ಟೆಂಬರ್​ 17,2024 (..):ವಕ್ಫ್ ತಂಟೆಗೆ ಬಂದ್ರೆ ಮುಸ್ಲಿಂ ಸಮಾಜ ನಿಮ್ಮನ್ನು ಮುಗಿಸುತ್ತೆ ಎಂದು ಪ್ರಚೋದನಾಕಾರಿ ಹೇಳಿಕೆ ನೀಡಿದ್ದ ಎಸ್ ಡಿಪಿಐ ಮುಖಂಡನ ವಿರುದ್ದ ಕಾರಟಗಿ ಪೊಲೀಸ್​ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ಎಸ್​ಡಿಪಿಐ ಜಿಲ್ಲಾ ಕಾರ್ಯದರ್ಶಿ ಇಮ್ರಾನ್ ಸೇರಿದಂತೆ ಮೂವರ ವಿರುದ್ಧ ಕಾರಟಗಿ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ. ಕೇಂದ್ರ ಸರ್ಕಾರ ಜಾರಿಗೆ ತರಲು ನಿರ್ಧರಿಸಿರುವ ವಕ್ಫ್​ ಬಿಲ್​-2024 ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ಸೆಪ್ಟೆಂಬರ್​ 13ರಂದು ಕಾರಟಗಿ ಪಟ್ಟಣದಲ್ಲಿ ಮುಸ್ಲಿಮರಿಂದ ಪ್ರತಿಭಟನೆ ನಡೆದಿತ್ತು. ಈ ಪ್ರತಿಭಟನೆಯಲ್ಲಿ ಭಾಷಣ ಮಾಡಿದ್ದ ಎಸ್​ಡಿಪಿಐ ಜಿಲ್ಲಾ ಕಾರ್ಯದರ್ಶಿ ಇಮ್ರಾನ್, ವಕ್ಫ್​​ ತಂಟೆಗೆ ಬಂದರೆ ನಿಮ್ಮನ್ನು ಮುಸ್ಲಿಂ ಸಮಾಜ ಮುಗಿಸುತ್ತೆ. ನೀವು ಯಾವ ಸಂತತಿಯಿಂದ ಬಂದಿದ್ದಿರೋ, ಯಾವ ದೇಶದಿಂದ ಬಂದಿದ್ದೀರೋ ಗೊತ್ತಿಲ್ಲ. ಆದರೆ, ನಿಮ್ಮ ಸಂತತಿಯನ್ನು ಮುಗಿಸಲಿಕ್ಕೆ ಮುಸ್ಲಿಂ ಸಮಾಜ ಇರುವುದು ಎನ್ನುವ ಸಂದೇಶ ಬಿಜೆಪಿಯವರಿಗೆ ನೀಡುತ್ತೇವೆ ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ್ದನು. ಈ ಸಂಬಂಧ ಇದೀಗ ಆತನ ವಿರುದ್ಧ ಬಿಜೆಪಿ ಕಾರಟಗಿ ಪೊಲೀಸ್​ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. : , , ,