ಈದ್ ಮಿಲಾದ್ ಮೆರವಣಿಗೆ ವೇಳೆ ಬಾವುಟ ಹಿಡಿದು ಪ್ಯಾಲಸ್ತೈನ್ ಪರ ಘೋಷಣೆ ಚಿತ್ರದುರ್ಗ,ಸೆಪ್ಟಂಬರ್, 16,2024 (..):ಈದ್ ಮಿಲಾದ್ ಮೆರವಣಿಗೆ ವೇಳೆ ಕೆಲವರು ಪ್ಯಾಲೆಸ್ತೈನ್ ಬಾವುಟ ಹಿಡಿದು ಪ್ಯಾಲಸ್ತೈನ್ ಪರ ಘೋಷಣೆ ಕೂಗಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಚಿತ್ರದುರ್ಗ ನಗರದ ಗಾಂಧಿ ವೃತ್ತದ ಬಳಿ ಈದ್ ಮಿಲಾದ್ ಮೆರವಣಿಗೆಯಲ್ಲಿ ಕೆಲ ಕಿಡಿಗೇಡಿ ಯುವಕರ ಗುಂಪೊಂದು ಪ್ಯಾಲೆಸ್ಟೈನ್ ಬಾವುಟ ಹಿಡಿದು ಪ್ಯಾಲೆಸ್ಟೈನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾರೆ. ಈ ವೇಳೆ ತಕ್ಷಣ ಎಚ್ಚೆತ್ತ ಪೊಲೀಸರು ಎರಡು ಧ್ವಜಗಳನ್ನು ವಶಕ್ಕೆ ಪಡೆದು ಕಿಡಿಗೇಡಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಹಾಗೆಯೇ ಲೋಕಾರದಲ್ಲೂ ಸಹ ಈದ್ ಮಿಲಾದ್ ಮೆರವಣಿಗೆ ಪ್ಯಾಲಸ್ತೈನ್ ಪರ ಘೋಷಣೆ ಕೂಗಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. : -, , ,