ಆ್ಯಕ್ಸನ್ ಕಟ್ ಹೇಳಲು ಮೋಹಲ್ ಲಾಲ್ ರೆಡಿ ! ಬೆಂಗಳೂರು, ಆಗಸ್ಟ್ 01, 2019 (..): ನಟ ಮೋಹನ್‌ಲಾಲ್‌ ನಿರ್ದೇಶಕನಾಗುತ್ತಿದ್ದಾರೆ. ‘ಬಾರೋಸ್‌’ ಎಂಬ ಬಿಗ್‌ ಬಜೆಟ್‌ ಥ್ರೀಡಿ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ವಾಸ್ಕೋಡಿಗಾಮ ಸಂಪತ್ತಿನ ಕಾವಲುಗಾರನಾದ ಬಾರೋಸ್‌ನ ಕತೆ ಈ ಸಿನಿಮಾವಾಗಿದ್ದರಿಂದ ಪೋರ್ಚುಗೀಸ್‌ ಕಥಾಹಂದರ ಹೊಂದಿದೆ. ಸ್ಪೇನ್‌ನ ನಟಿ ಪಜ್‌ ವೇಗಾ ಹಾಗೂ ನಟ ರಫೇಲ್‌ ಅಮರ್ಗೊ ಅವರು ಪಾತ್ರ ಮಾಡಲಿದ್ದಾರೆ. ಅಂತರರಾಷ್ಟ್ರೀಯ ಸಿನಿಮಾದಲ್ಲಿ ಪಜ್‌ ವೇಗಾ ಹೆಸರು ಚಿರ‍ಪರಿಚಿತವಾಗಿದೆ.