ದೇಶವ್ಯಾಪಿ ಇಂದು ಖಾಸಗಿ ಆಸ್ಪತ್ರೆಯ ಓಪಿಡಿ ಬಂದ್ ಹಿನ್ನೆಲೆ: ಕೆ.ಆರ್. ಆಸ್ಪತ್ರೆಯತ್ತ ಹೆಚ್ಚಿನ ಜನ: ಸಿಬ್ಬಂದಿ ರಜೆ ಕಟ್.. ಮೈಸೂರು,ಜು,31,2019(..): ನ್ಯಾಷನಲ್ ಮೆಡಿಕಲ್ ಕೌನ್ಸಿಲ್‌ ಬಿಲ್ ಜಾರಿ ಹಿನ್ನಲೆ, ಇಂದು ದೇಶವ್ಯಾಪಿ ಖಾಸಗಿ ಆಸ್ಪತ್ರೆಯ ಓಪಿಡಿ ಬಂದ್ ಮಾಡಲಾಗಿದೆ. ಖಾಸಗಿ ಆಸ್ಪತ್ರೆ ಬಂದ್ ಹಿನ್ನೆಲೆಯಲ್ಲಿ ಸಾರ್ವಜನಿಕರು ಸರ್ಕಾರಿ ಆಸ್ಪತ್ರೆಯ ಕಡೆ ಮುಖ ಮಾಡಿದ್ದಾರೆ. ಖಾಸಗಿ ಆಸ್ಪತ್ರೆಯ ಒಪಿಡಿ ಬಂದ್ ಹಿನ್ನೆಲೆ ಕೆ.ಆರ್. ಆಸ್ಪತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸುತ್ತಿದ್ದು, ರೋಗಿಗಳು ಹೆಚ್ಚಾಗಿ ಬರುವ ಸಾಧ್ಯತೆಯಲ್ಲಿ ಮೈಸೂರಿನ ಕೆ.ಆರ್ ಆಸ್ಪತ್ರೆಯಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಕೆ.ಆರ್. ಆಸ್ಪತ್ರೆ ಸಿಬ್ಬಂದಿ ರಜೆ ಕಟ್ ಮಾಡಲಾಗಿದ್ದು, ನೂರಕ್ಕೆ ನೂರರಷ್ಟು ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗಲು ಸೂಚನೆ ನೀಡಲಾಗಿದೆ ಎಂದು ಕೆ.ಆರ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ನಂಜುಂಡ ಸ್ವಾಮಿ ಬಿಎಲ್ ಮಾಹಿತಿ ನೀಡಿದ್ದಾರೆ. ಇನ್ನು ಇಂದು 24 ಗಂಟೆಯೂ ಕೆ‌.ಆರ್. ಆಸ್ಪತ್ರೆಯ ಓಪಿಡಿ ಸೇವೆ ತೆರೆದಿರಲಿದೆ. : - –- - --24