ಕ್ರೇಜಿಸ್ಟಾರ್ ಪುತ್ರನ ಜತೆ ಡ್ಯುಯೆಟ್ ಹಾಡಲು ಸಜ್ಜಾದ ‘ಪಂಚತಂತ್ರ’ ಬೆಡಗಿ ಅಕ್ಷರ ಬೆಂಗಳೂರು, ಜುಲೈ 31, 2019 (..): ಕ್ರೇಜ್ ಸ್ಟಾರ್ ರವಿಚಂದ್ರನ್ ಎರಡನೆ ಪುತ್ರ ವಿಕ್ರಮ್ ರವಿಚಂದ್ರನ್ ಅಭಿನಯದ ಚೊಚ್ಚಲ ಚಿತ್ರ ‘ತ್ರಿವಿಕ್ರಮ’ ಗಾಗಿ ತಯಾರಿ ಪೂರ್ಣಗೊಂಡಿದೆ. ಈಗಾಗಲೇ ಪ್ರಿಪ್ರೊಡಕ್ಷನ್ ಕೆಲಸ ಮುಗಿಸಿ ಚಿತ್ರೀಕರಣಕ್ಕೆ ಚಿತ್ರತಂಡ ಸಜ್ಜಾಗಿದೆ. ಅಂದ್ಹಾಗೆ ಚಿತ್ರಕ್ಕೆ ಈಗಾಗಲೇ ನಾಯಕಿ ಆಗಮನ ಕೂಡ ಆಗಿದೆ. ವಿಕ್ರಮ್ ಜೊತೆ ನಾಯಕಿಯಾಗಿ ಮುಂಬೈ ಮೂಲದ ಬೆಡಗಿ ಆಕಾಂಕ್ಷ ಶರ್ಮಾ ಕಾಣಿಸಿಕೊಳ್ಳಲಿದ್ದಾರೆ. ಇನ್ನು ‘ಪಂಚತಂತ್ರ’ ಸಿನಿಮಾದ ಬೆಡಗಿ ಅಕ್ಷರ ಗೌಡ ಎರಡನೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಅಕ್ಷರಾ, ವಿಕ್ರಮ್ ಜೊತೆ ಡ್ಯುಯೆಟ್ ಹಾಡಲು ಸಜ್ಜಾಗಿದ್ದಾರೆ.