ಕಾಣದ ಕೈ ಗಳು ಸಿದ್ಧಾರ್ಥ್ ಅವರ ಬದುಕನ್ನ ಅಂತ್ಯಗೊಳಿಸಿವೆ- ಮಾಜಿ ಸಿಎಂ ಸಿದ್ದರಾಮಯ್ಯ ಟ್ವಿಟ್… ಬೆಂಗಳೂರು,ಜು,31,2019(..): ಕಾಣದ ಕೈಗಳು ಸಿದ್ಧಾರ್ಥ್ ಅವರ ಬದುಕನ್ನ ಅಂತ್ಯಗೊಳಿಸಿವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ. ಉದ್ಯಮಿ ಸಿದ್ಧಾರ್ಥ್ ಅವರ ಸಾವಿಗೆ ಸಂತಾಪ ಸೂಚಿಸಿ ಟ್ವಿಟ್ ಮಾಡಿರುವ ಸಿದ್ದರಾಮಯ್ಯ, ಸಿದ್ದಾರ್ಥ್ ಸಾವು ಮನಸ್ಸನ್ನ ಕದಡುತ್ತಿದೆ. ಕಾಣದ ಕೈ ಗಳು ಸಿದ್ಧಾರ್ಥ್ ಅವರ ಬದುಕನ್ನ ಅಂತ್ಯಗೊಳಿಸಿವೆ. ಪಾರದರ್ಶಕ ತನಿಖೆ ಮೂಲಕ ಇದು ಬಹಿರಂಗಗೊಳಿಸಬೇಕು. ನಾನು ನಮ್ಮ ಪಕ್ಷ ಎಸ್.ಎಂ ಕೃಷ್ಣ ಅವರ ನ್ಯಾಯದ ಹೋರಾಟಕ್ಕೆ ಜೊತೆಯಾಗಿರುತ್ತೇವೆ ಎಂದು ಹೇಳಿದ್ದಾರೆ. ಸಿದ್ಧಾರ್ಥ್ ರನ್ನು ಸಾವಿಗೆ ದೂಡಿದ ಕಾರಣಗಳು ಮತ್ತು ಅದರ ಹಿಂದಿನ ಕಾಣದ ಕೈಗಳ ಬಗ್ಗೆ ಸಮಗ್ರ ತನಿಖೆಯಾದರೆ ಮಾತ್ರ ಅವರ ಸಾವಿಗೆ ನಿಜವಾದ ಶ್ರದ್ಧಾಂಜಲಿ ಸಿಕ್ಕಂತಾಗುತ್ತದೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. : - - ’- - -