ಸಫಾರಿ ವಾಹನದ ಮೇಲೆ ಗಜರಾಜನಿಂದ ಅಟ್ಯಾಕ್: ಬೆಚ್ಚಿಬಿದ್ದ ಪ್ರವಾಸಿಗರು… ಬಂಡೀಪುರ,ಜು,30,2019(..): ಸಫಾರಿ ವಾಹನದ ಮೇಲೆ ಆನೆ ದಾಳಿ ನಡೆಸಿ ಸಫಾರಿ ವ್ಯಾನಿನ ಗ್ಲಾಸ್ ಪುಡಿಪುಡಿ ಮಾಡಿದ್ದು ಗಜರಾಜನ ಅಟ್ಯಾಕ್ ನಿಂದ ಪ್ರವಾಸಿಗರು ಬೆಚ್ಚಿಬಿದ್ದ ಘಟನೆ ನಡೆದಿದೆ. ಬಂಡೀಪುರ ಸಫಾರಿ ಜೋನ್​​​ನಲ್ಲಿ ಜಂಗಲ್ ಲಾಡ್ಜ್​​​ನ ಸಫಾರಿ ವಾಹನದ ಮೇಲೆ ಆನೆ ದಾಳಿ ನಡೆಸಿದೆ. ಸಫಾರಿಗೆ ತೆರಳಿದ್ದ ವೇಳೆ ಆನೆಯ ಮುಂದಕ್ಕೆ ಸಫಾರಿ ವ್ಯಾನ್ ಓಡಿಸಿದ್ದರಿಂದ ಆನೆ ಒತ್ತಡಕ್ಕೊಳಗಾಗಿ ಗಾಬರಿಯಿಂದ ದಾಳಿ ನಡೆಸಿದೆ ಎನ್ನಲಾಗಿದೆ. ಇನ್ನು ವ್ಯಾನ್ ಮುಂಭಾಗಕ್ಕೆ ಗಜರಾಜ ಗುದ್ದಿ ವ್ಯಾನ್ ಗಾಜು ಪುಡಿ ಪುಡಿ ಮಾಡಿದ್ದಾನೆ. ಆನೆ ದಾಳಿಗೆ ಪ್ರವಾಸಿಗರು ಬೆಚ್ಚುಬಿದ್ದಿರು. ಕಾಡು ಪ್ರಾಣಿಗಳ ಏಕಾಂತಕ್ಕೆ ಧಕ್ಕೆ ತಂದರೇ ಅವುಗಳು ನೀಡುವ ಉತ್ತರಕ್ಕೆ ಇಂತಹ ಘಟನೆಗಳು ಸ್ಪಷ್ಟ ನಿದರ್ಶನವಾಗಿದೆ. ಹೀಗಾಗಿ ಪ್ರಾಣಿಗಳನ್ನ ದೂರದಿಂದಲೇ ನೋಡಿ ಖುಷಿ ಪಡಬೇಕೇ ಹೊರತು ಅವುಗಳಿಗೆ ತೊಂದರೆಯಾಗುವಂತೆ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ. : -- - -- .