ಕೆಎಂಎಫ್ ಚುನಾವಣೆ ಉದ್ದೇಶಪೂರ್ವಕವಾಗಿ ಮುಂದೂಡಿಕೆ- ಮಾಜಿ ಸಚಿವ ಹೆಚ್.ಡಿ ರೇವಣ್ಣ ಕಿಡಿ… ಬೆಂಗಳೂರು,ಜು,29,2019(..): ಕೆಎಂಎಫ್ ಚುನಾವಣೆ ಉದ್ದೇಶಪೂರ್ವಕವಾಗಿ ಮುಂದೂಡಿಕೆ ಮಾಡಲಾಗಿದೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಕಿಡಿಕಾರಿದರು. ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಹೆಚ್.ಡಿ ರೇವಣ್ಣ, ಸಿಎಂ ಬಿಎಸ್ ಯಡಿಯೂರಪ್ಪ ದ್ವೇಷದ ರಾಜಕಾರಣ ಮಾಡಲ್ಲ ಎಂದಿದ್ದರು. ಈಗ ನಾವು ಗೆಲ್ಲುತ್ತೇವೆ ಎಂದು ಇಲಾಖೆ ಅಧಿಕಾರಿಗಳ ಮೇಲೆ ಒತ್ತಡ ಹೇರ ಉದ್ದೇಶಪೂರ್ವಕವಾಗಿ ಚುನಾವಣೆ ಮುಂದೂಡಿಕೆ ಮಾಡಲಾಗಿದೆ ಎಂದು ಆರೋಪಿಸಿದರು. ಜುಲೈ30ರೊಳಗೆ ಎಲ್ಲಾ ಚುನಾವಣೆ ಆಗಬೇಕೆಂದು ಅಯೋಗ ತಿಳಿಸಿತ್ತು. ಚುನಾವಣೆ ಘೋಷಣೆಯಾದ 2 ತಾಸಿನಲ್ಲಿಯೇ ಮುಂದೂಡಿಕೆ ಮಾಡಲಾಗಿದೆ. ಭೀಮಆನಾಯಕ್ ಗೆ 1 ಲೀಟರ್ ಹಾಲು ಸಹ ಸಾಕಾಗಲ್ಲ ಎಂದು ಹೆಚ್.ಡಿ ರೇವಣ್ಣ ಲೇವಡಿ ಮಾಡಿದರು. ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕಾಗಿ ಕಾಂಗ್ರೆಸ್ ಶಾಸಕ ಭೀಮಾನಾಯ್ಕ್ ಲಾಬಿ ನಡೆಸುತ್ತಿದ್ದಾರೆ. : - - –- -