ವರ್ಷದಿಂದ ವರ್ಷಕ್ಕೆ ಶ್ರೀಮಂತಳಾಗುತ್ತಿರುವ ತಾಯಿ ಚಾಮುಂಡೇಶ್ವರಿ: ಆಷಾಢ ಶುಕ್ರವಾರ, ವರ್ಧಂತಿಯ ದಿನದ ಆದಾಯದಲ್ಲಿ ಹೆಚ್ಚಳ… ಮೈಸೂರು,ಜು,27,2019(..): ವರ್ಷದಿಂದ ವರ್ಷಕ್ಕೆ ಮೈಸೂರಿನ ತಾಯಿ ಚಾಮುಂಡೇಶ್ವರಿ ಶ್ರೀಮಂತಳಾಗುತ್ತಿದ್ದು, ಈ ವರ್ಷದ ಆಷಾಢ ಶುಕ್ರವಾರ ವರ್ಧಂತಿಯ ದಿನದ ಆದಾಯದಲ್ಲಿ ಹೆಚ್ಚಳವಾಗಿದೆ. ಧಾರ್ಮಿಕ ದತ್ತಿ ಇಲಾಖೆಯು ಆಷಾಢ ಶುಕ್ರವಾರ ಮತ್ತು ವರ್ಧಂತಿಯ ದಿನದ ಆದಾಯ ದಾಖಲೆ ಬಿಡುಗಡೆ ಮಾಡಿದ್ದು, ತಾಯಿ ಚಾಮುಂಡೇಶ್ವರಿ ಸನ್ನಿಧಿಗೆ ಕೋಟಿ ಕೋಟಿ ಹಣ ಹರಿದು ಬಂದಿದೆ. ಈ ಬಾರಿ ಚಾಮುಂಡೇಶ್ವರಿ ದರ್ಶನಕ್ಕೆ ಲಕ್ಷಾಂತರ ಭಕ್ತಾದಿಗಳು ಆಗಮಿಸಿದ್ದ ಹಿನ್ನೆಲೆ ಕಳೆದ ಸಾಲಿಗಿಂತ 48 ಲಕ್ಷ ರೂ ಹೆಚ್ಚಿನ ಆದಾಯ ಬಂದಿದೆ. ಕಳೆದ ಬಾರಿ 1,02,17,200 ರೂ ಸಂಗ್ರಹವಾಗಿತ್ತು.. ಈ ವರ್ಷ ಸುಮಾರು 1,50,,15,870 ರೂ ಹಣ ಸಂಗ್ರಹವಾಗಿದೆ. ಈ ಮೂಲಕ 48 ಲಕ್ಷ ರೂ ಹೆಚ್ಚಿನ ಆದಾಯ ಬಂದಿದೆ. ಕೇವಲ ಟಿಕೆಟ್ ಹಣದಿಂದಲೇ ತಾಯಿ ಚಾಮುಂಡೇಶ್ವರಿಯ ಮಡಿಲು ತುಂಬಿದ್ದು. 50-300 ರೂಗಳ ಟಿಕೇಟ್ ನಿಂದಲೇ ಸುಮಾರು 1.50 ಕೋಟಿ ಹಣ ಸಂಗ್ರಹವಾಗಿದೆ. : - –- -