ನೂರಕ್ಕೆ ನೂರರಷ್ಟು ಬಹುಮತ ಸಾಬೀತು ಮಾಡ್ತೇವೆ- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿಶ್ವಾಸ… ಬೆಂಗಳೂರು,ಜು,27,2019(..): ನೂರಕ್ಕೆ ನೂರರಷ್ಟು ನಾವು ಬಹುಮತವನ್ನ ಸಾಬೀತು ಮಾಡುತ್ತೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದು ಸಿಎಂ ಆಗಿ ಬಿಎಸ್ ಯಡಿಯೂರಪ್ಪ ನಿನ್ನೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ನಡುವೆ ಅವರು ಬಹುಮತ ಸಾಬೀತು ಮಾಡಬೇಕಾಗಿದ್ದು ಸೋಮವಾರ ಬಹುಮತ ಸಾಬೀತು ಪಡಿಸುವ ಸಾಧ್ಯತೆ ಇದೆ. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬಿಎಸ್ ಯಡಿಯೂರಪ್ಪ ಒಬ್ಬ ಹೋರಾಟಗಾರರು. ಸ್ವಪ್ರಯತ್ನದಿಂದ ರೈತನಾಯಕರಾಗಿ ಬೆಳೆದಿದ್ದಾರೆ. ಸಿಎಂ ಆಗಿ ಬಂದ ತಕ್ಷಣ ರೈತರ ಪರವಾದ ನಿರ್ಧಾರ ಕೈಗೊಂಡಿದ್ದಾರೆ. ರೈತರು ನೇಕಾರರು ಬಡವರಿಗೆ ಆದ್ಯತೆ ನೀಡುತ್ತಾರೆ. ಈ ನಡುವೆ ನಾವು ನೂರಕ್ಕೆ ನೂರು ಬಹುಮತ ಸಾಬೀತು ಮಾಡುತ್ತೇವೆ ಎಂದರು. : – – - -