: ಎರಡು ಸ್ಥಾನ ಕುಸಿದ ಟೀಂ ಇಂಡಿಯಾ ಹೊಸದಿಲ್ಲಿ, ಜುಲೈ 26, 20118 (..): ನೂತನ ಫಿಫಾ Rankingನಲ್ಲಿ ಭಾರತೀಯ ಫುಟ್ಬಾಲ್ ತಂಡ ಎರಡು ಸ್ಥಾನ ಕಳೆದುಕೊಂಡು 103ನೇ ಸ್ಥಾನಕ್ಕೆ ಕುಸಿದಿದೆ. ಇತ್ತೀಚೆಗೆ ನಡೆದಿದ್ದ ಇಂಟರ್‌ಕಾಂಟಿನೆಂಟೆಲ್ ಕಪ್‌ನಲ್ಲಿ ಭಾರತ ಒಂದೂ ಪಂದ್ಯವನ್ನು ಜಯಿಸಿರಲಿಲ್ಲ. ತಜಕಿಸ್ತಾನ(2-4) ಹಾಗೂ ಡಿಪಿಆರ್ ಕೊರಿಯಾ(2-5) ವಿರುದ್ಧ ಸೋತಿರುವ ಭಾರತ ಟೂರ್ನಿಯ ಕೊನೆಯ ಪಂದ್ಯದಲ್ಲಿ ಸಿರಿಯಾ ವಿರುದ್ಧ 1-1 ರಿಂದ ಡ್ರಾ ಸಾಧಿಸಿತ್ತು. ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿರುವ ಸುನೀಲ್ ಚೆಟ್ರಿ ಬಳಗ ಐದು ಅಂಕ ಕಳೆದುಕೊಂಡಿದೆ. ಎಪ್ರಿಲ್‌ನಲ್ಲಿ ಭಾರತ 101ನೇ ಸ್ಥಾನಕ್ಕೆ ಜಿಗಿದಿತ್ತು.