ನನ್ನನ್ನು ಮದುವೆಯಾಗುತ್ತೀರಾ ಎಂದ ಅಭಿಮಾನಿಗೆ ನಟ ಮಾಧವನ್ ಕೊಟ್ಟ ಪ್ರತಿಕ್ರಿಯೆಯೇನು ನವದೆಹಲಿ:ಜುಲೈ-25:(..) ನಟ ಮಾಧವನ್ ಅವರು ಇತ್ತೀಚೆ ಇನ್ ಸ್ಟಾಗ್ರಾಂ ನಲ್ಲಿ ಹಂಚಿಕೊಂದಿರುವ ಗೆಟಿಂಗ್ ಓಲ್ಡರ್…ಫೋಟೋ ಹಾಗೂ ಅವರ ಹೊಸ ಚಿತ್ರ ’ರಾಕೆಟ್ರಿ: ದಿ ನಂಬಿ ಎಫೆಕ್ಟ್‌’ನ ಅವರ ಹೊಸ ಲುಕ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಕಮೆಂಟ್ ಗಳ ಸುರಿಮಳೆಯೇ ಬರುತ್ತಿದೆ. 49 ವರ್ಷದ ಬಹುಭಾಷಾ ನಟ ಇತ್ತೀಚೆಗೆ ಇನ್ಸ್ಟಾಗ್ರಾಮ್ನಲ್ಲಿ “ವಯಸ್ಸಾಗುತ್ತಿರುವ” ಗೆಟ್ಟಿಂಗ್ ಓಲ್ಡ್ ಎಂಬ ಅಡಿಬರದೊಂದಿಗೆ ಸೆಲ್ಫಿಯನ್ನು ಹಂಚಿಕೊಂಡಿದ್ದರು. ಬಿಳಿಬಣ್ಣಕ್ಕೆ ತಿರುಗುತ್ತಿರುವ ತಲೆಕೂದಲು, ಮುಖದಲ್ಲಿ ಅಲ್ಲಲ್ಲಿ ಮೂಡುತ್ತಿರುವ ಬಿಳಿಗಡ್ಡದ ಜತೆಗಿನ ಈ ಫೋಟೋದಲ್ಲಿ ವಯಸ್ಸಾಗುತ್ತಿದ್ದರೂ ಮಾಧವನ್ ಸಖತ್ ಹಾಟ್ ಆಗಿ ಕಾಣುತ್ತಿದ್ದಾರೆ. ಮಾಧವನ್ ಈ ಫೋಟೋಗೆ ಫಿದಾ ಆಗಿರುವ 18 ವರ್ಷದ ಅಭಿಮಾನಿಯೊಬ್ಬರು, ನೀವು ನನ್ನ ಮದುವೆಯಾಗುತ್ತೀರಾ ಎಂದು ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಮಾಧವನ್, ’ಹಾ ಹಾ…ದೇವರು ನಿಮಗೆ ಒಳ್ಳೆಯದು ಮಾಡಲಿ, ನನಗಿಂತ ಯೋಗ್ಯವಾದ ವ್ಯಕ್ತಿ ನಿಮಗೆ ಸಿಗುತ್ತಾನೆಎಂದು ಬರೆದಿದ್ದಾರೆ. ಇನ್ನು ಮಾಧವನ್‌ ನಟಿಸುತ್ತಿರುವ ಚಿತ್ರ ‘ರಾಕೆಟ್ರಿ ದಿ ನಂಬಿ ಎಫೆಕ್ಟ್‌’ಗೆ ಟ್ರೋಲ್‌ಗಳ ಎಫೆಕ್ಟ್‌ ಕೂಡ ಜೋರಾಗಿದೆ. ಖ್ಯಾತ ರಾಕೆಟ್‌ ವಿಜ್ಞಾನಿ ನಂಬಿ ನಾರಾಯಣ್‌ ಅವರ ಜೀವನ ಚರಿತ್ರೆಯನ್ನು ಆಧರಿಸಿದ ಚಿತ್ರದಲ್ಲಿ ನಂಬಿ ಅವರ ಪಾತ್ರವನ್ನು ಮಾಡುತ್ತಿರುವ ಮಾಧವನ್‌ ಫೋಟೋಗಳು ಪಕ್ಕಾ ನಂಬಿ ನಾರಾಯಣ್‌ ನಂತೆಯೇ ಕಾಣುತ್ತಿವೆ. ಈ ಫೋಟೋ ಕೂಡ ಜಾಲತಾಣಗಲ್ಲಿ ಭಾರೀ ಸದ್ದು ಮಾಡುತ್ತಿವೆ.