‘ಮಿಷನ್ ಮಂಗಳ್’ ಚಿತ್ರದಲ್ಲಿ ಕನ್ನಡದ ದತ್ತಣ್ಣ ಬೆಂಗಳೂರು, ಜುಲೈ 25, 2019 (..): ಆಗಸ್ಟ್ 15ರಂದು ದೇಶಾದ್ಯಂತ ಬಿಡುಗಡೆಗೆ ಸಿದ್ಧವಾಗಿರುವ ‘ಮಿಷನ್ ಮಂಗಳ್’ ಚಿತ್ರದಲ್ಲಿ ಕನ್ನಡದ ಹಿರಿಯ ನಟ ದತ್ತಣ್ಣ ನಟಿಸಿದ್ದಾರೆ. ಇತ್ತೀಚೆಗೆ ‘ಮಿಷನ್​ ಮಂಗಳ್​’ ಚಿತ್ರದ ಟ್ರೈಲರ್​ ಬಿಡುಗಡೆ ವೇಳೆ ದತ್ತಣ್ಣನವರ ಬಗ್ಗೆ ಬಹುತೇಕ ಕನ್ನಡಿಗರಿಗೆ ತಿಳಿಯದ ಹಲವು ವಿಷಯಗಳನ್ನು ನಟ ಅಕ್ಷಯ್ ಕುಮಾರ್ ತಿಳಿಸಿಕೊಟ್ಟಿದ್ದಾರೆ. ಅಲ್ಲದೆ ದತ್ತಣ್ಣ ಕೂಡ ಮಾತನಾಡಿ, ಚಿತ್ರರಂಗಕ್ಕೆ ಕಾಲಿಡುವ ಮೊದಲು ತಾವು ಮಾಡುತ್ತಿದ್ದ ವೃತ್ತಿಯ ಬಗ್ಗೆ ಹೇಳಿ ಕನ್ನಡಿಗರು ‘ವಾವ್’ ಎನ್ನುವಂತೆ ಮಾಡಿದ್ದಾರೆ.