‘‘ಗ್ರಾಮೀಣಾಭಿವೃದ್ಧಿಗಾಗಿ ವಿಜ್ಞಾನ–ತಂತ್ರಜ್ಞಾನ’ : 107 ನೇ ಇಂಡಿಯನ್ ಸೈನ್ಸ್ ಕಾಂಗ್ರೆಸ್ ನ ಘೋಷವಾಕ್ಯ.. ಬೆಂಗಳೂರು, ಜು.24, 2019 : (.. ) : ‘ಗ್ರಾಮೀಣಾಭಿವೃದ್ಧಿಗಾಗಿ ವಿಜ್ಞಾನ–ತಂತ್ರಜ್ಞಾನ ‘ ಘೋಷವಾಕ್ಯದಡಿ ಭಾರತೀಯ ವಿಜ್ಞಾನ ಕಾಂಗ್ರೆಸ್ ನ 107 ನೇ ಸಮಾವೇಶ ನಡೆಯಲಿದೆ. ಭಾರತೀಯ ವಿಜ್ಞಾನ ಕಾಂಗ್ರೆಸ್‌ನ 107ನೇ ಸಮಾವೇಶ 2020ರ ಜನವರಿ 3 ರಿಂದ 7ರವರೆಗೆ ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ಆವರಣದಲ್ಲಿ ನಡೆಯಲಿದೆ. ಈ ಸಮಾವೇಶವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸುವರು. ಈ ಸಂಬಂಧ ಭಾರತೀಯ ವಿಜ್ಞಾನ ಕಾಂಗ್ರೆಸ್ ನ ಅಧ್ಯಕ್ಷರು, ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಹಾಗೂ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಕುಲಪತಿ ಡಾ.ಎಸ್. ರಾಜೇಂದ್ರ ಪ್ರಸಾದ್‌ ಮಂಗಳವಾರ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಹೇಳಿದಿಷ್ಟು… ‘ಗ್ರಾಮೀಣಾಭಿವೃದ್ಧಿಗಾಗಿ ವಿಜ್ಞಾನ–ತಂತ್ರಜ್ಞಾನ ಎಂಬ ಘೋಷವಾಕ್ಯದಡಿ ನಡೆಯಲಿರುವ ಈ ಸಮಾವೇಶದಲ್ಲಿ ದೇಶ–ವಿದೇಶಗಳ ಸುಮಾರು 20 ಸಾವಿರ ಪ್ರತಿನಿಧಿಗಳು ಭಾಗವಹಿಸುವರು. ಪ್ರಧಾನಮಂತ್ರಿ, ರಾಷ್ಟ್ರಪತಿ, ಉಪರಾಷ್ಟ್ರಪತಿ, ನೊಬೆಲ್‌ ಪ್ರಶಸ್ತಿ ಪುರಸ್ಕೃತರು, ಸಾರ್ಕ್‌ ರಾಷ್ಟ್ರಗಳ ವಿಜ್ಞಾನಿಗಳು, ವಿದ್ವಾಂಸರು ಸೇರಿದಂತೆ ಐದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಮಾವೇಶದಲ್ಲಿ ಪಾಲ್ಗೊಳ್ಳುವರು’ಮೂಲ ವಿಜ್ಞಾನಕ್ಕೆ ಒತ್ತು ನೀಡುವ ಉದ್ದೇಶದಿಂದ ಸಮಾವೇಶ ಆಯೋಜಿಸಲಾಗುತ್ತಿದೆ. ಉನ್ನತ ಶಿಕ್ಷಣದ ಕುರಿತು ಚರ್ಚೆ ನಡೆಸುವುದರ ಜೊತೆಗೆ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಯಾವ ರೀತಿ ಬಳಸಿಕೊಳ್ಳಬೇಕು ಎಂಬುದರ ಮೇಲೆ ಬೆಳಕು ಚೆಲ್ಲಲಾಗುವುದು. ವಿಜ್ಞಾನ ಸಮಾವೇಶದ ಜೊತೆಗೇ, ರೈತರು, ಮಹಿಳೆಯರು, ಮಕ್ಕಳು, ಯುವಸಮೂಹ ಮತ್ತು ವಿಶ್ರಾಂತ ಕುಲಪತಿಗಳ ಸಮಾವೇಶವೂ ನಡೆಯಲಿದೆ.ವಿಜ್ಞಾನ ವಸ್ತುಪ್ರದರ್ಶನ ಸಮಾವೇಶದ ಪ್ರಮುಖ ಆಕರ್ಷಣೆ. ಇಸ್ರೊ, ಡಿಆರ್‌ಡಿಒದಂತಹ ಪ್ರಮುಖ ಸಂಸ್ಥೆಗಳು ಅಭಿವೃದ್ಧಿಪಡಿಸಿದ ಮಾದರಿಗಳ ಪ್ರದರ್ಶನ ನಡೆಯಲಿದೆ. ಶಾಲಾ–ಕಾಲೇಜು ವಿದ್ಯಾರ್ಥಿಗಳು ವಸ್ತುಪ್ರದರ್ಶನ ವೀಕ್ಷಿಸಬಹುದು ಐದು ದಿನಗಳ ಈ ಸಮಾವೇಶದಲ್ಲಿ ಪಾಲ್ಗೊಳ್ಳಲು ಬಯಸುವ ಗಣ್ಯರಿಗೆ 1,800 ರೂ. ಹಾಗೂ ವಿದ್ಯಾರ್ಥಿಗಳಿಗೆ 1,000 ರೂ. ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ನವೆಂಬರ್‌ 15ರೊಳಗೆ ನೋಂದಣಿ ಮಾಡಿಕೊಳ್ಳಬೇಕು. ಮಾಹಿತಿಗೆ, ದೂರವಾಣಿ ಸಂಖ್ಯೆ – 9180– 23636751, 2330153 ಅಥವಾ 94498–64256, ವೆಬ್‌ಸೈಟ್‌–.isc2020uasb. ಸಂಪರ್ಕಿಸಬಹುದು. : 107th -“ -..———– “ ” 107th () . : “ 107th () () 3rd 7th, .” , , 107th () 3-7th 2020 . - , , : “ 20,000 , , , , . “ “ ” ,” . : “ ‘ - ’ . , . , ’ . ’ ,