ಚಾಮುಂಡೇಶ್ವರಿ ವರ್ಧಂತಿಯಲ್ಲಿ ಸರಗಳ್ಳರ ಕೈಚಳಕ: ವೃದ್ದೆಯ ಸರ ದೋಚಿದ ಖದೀಮರು.. ಮೈಸೂರು,ಜು,24,2019(..): ತಾಯಿ ಚಾಮುಂಡೇಶ್ವರಿ ವರ್ಧಂತಿ ನಡೆಯುತ್ತಿದ್ದ ವೇಳೆ ವೃದ್ಧ ಭಕ್ತೆಯೊಬ್ಬರ ಸರಗಳ್ಳರು ದೋಚಿ ಪರಾರಿಯಾಗಿರುವ ಘಟನೆ ಇಂದು ನಡೆದಿದೆ. ಇಂದು ತಾಯಿಚಾಮುಂಡೇಶ್ವರಿಯ ವರ್ಧಂತಿ. ಈ ಹಿನ್ನೆಲೆ ಚಾಮುಂಡಿ ದೇವಿಯನ್ನ ಹೊತ್ತು ಸಾಗುತ್ತಿದ್ದ ಚಿನ್ನದ ಪಲ್ಲಕ್ಕಿಗೆ ಕೈ ಮುಗಿವ ವೇಳೆ ಸರಗಳ್ಳರು ತಮ್ಮ ಕೈಚಳಕ ತೋರಿದಿದ್ದಾರೆ. ಮೈಸೂರಿನ ಸಿದ್ಧಾರ್ಥ ನಗರದ ನಿವಾಸಿ ಚಾಮಮ್ಮ ಎಂಬುವವರ 35 ಗ್ರಾಂ ಚಿನ್ನದ ಸರವನ್ನ ಕಳ್ಳರು ಲಪಟಾಯಿಸಿದ್ದಾರೆ. ಈ ಕುರಿತು ಕೆ.ಆರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. : - - -