ರಂಗದ ಮೇಲೆ ಹಾಸ್ಯ ಚಕ್ರವರ್ತಿ ನರಸಿಂಹ ರಾಜು ಬದುಕು ಅನಾವರಣ ಬೆಂಗಳೂರು, ಜುಲೈ 24, 2019 (..): ಹಾಸ್ಯ ಚಕ್ರವರ್ತಿ ನರಸಿಂಹ ರಾಜು ಜೀವನ ಚರಿತ್ರೆಯನ್ನು ನಾಟಕದ ರೂಪದಲ್ಲಿ ಪ್ರಸ್ತುತ ಪಡಿಸಲು ಸಕಲ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಇಂದು (ಜು.24) ನರಸಿಂಹರಾಜು ಜನ್ಮದಿನ, ಹೀಗಾಗಿ ಅವರ ಹುಟ್ಟುಹಬ್ಬ ಆಚರಿಸುವುದರ ಜತೆಗೆ ನಾಟಕದ ಕೆಲಸಗಳಿಗೆ ಚಾಲನೆ ಸಿಗಲಿದೆ. ಈಗಾಗಲೇ ಈ ನಾಟಕದ ಕಲಾವಿದರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು, ನರಸಿಂಹ ರಾಜು ಪಾತ್ರಕ್ಕೆ ಲಕ್ಷ್ಮಣ್ ಪೂಜಾರಿ ಎಂಬುವವರು ಬಣ್ಣ ಹಚ್ಚಲಿದ್ದಾರೆ.