ಕಳೆದ ಸರ್ಕಾರದಲ್ಲಿ ಮೈಸೂರಿಗೆ ಯಾವುದೇ ಅಭಿವೃದ್ಧಿ ಆಗಿಲ್ಲ-ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ಬಿಜೆಪಿ ಶಾಸಕ ಎಲ್. ನಾಗೇಂದ್ರ ಹೇಳಿಕೆ…. ಮೈಸೂರು,ಜು,24,2019(..): ಕಳೆದ ಸರ್ಕಾರದಲ್ಲಿ ಮೈಸೂರಿನಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ. ನಾನು ಶಾಸಕನಾಗಿ ನನ್ನ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇನೆ ಎಂದು ಬಿಜೆಪಿ ಶಾಸಕ ಎಲ್. ನಾಗೇಂದ್ರ ತಿಳಿಸಿದರು. ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವ ಹಿನ್ನಲೆ ಇಂದು ಶಾಸಕ ಎಲ್.ನಾಗೇಂದ್ರ ಕುಟುಂಬ ಸಮೇತ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮಾತನಾಡಿದ ಶಾಸಕ ಎಲ್. ನಾಗೇಂದ್ರ, ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ನಾನು ಶಾಸಕನಾಗಿ ನನ್ನ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇನೆ. ನನ್ನ ಕ್ಷೇತ್ರಕ್ಕೆ ಬೇಕಾದ ಎಲ್ಲಾ ಅನುದಾನವನ್ನ ತರುತ್ತೇನೆ. ಕಳೆದ ಸರ್ಕಾರದಲ್ಲಿ ಮೈಸೂರಿಗೆ ಯಾವುದೆ ಅಭಿವೃದ್ಧಿ ಆಗಿಲ್ಲ. ಸದ್ಯದಲ್ಲಿ ದಸರಾ ಬರುತ್ತಿದೆ. ಅದಕ್ಕೆ ಸಂಬಂಧಿಸಿದಂತೆ ಸದ್ಯದಲ್ಲಿಯೇ ಹೈಪವರ್ ಮೀಟಿಂಗ್ ಕರೆಯುತ್ತೇನೆ. ಈ ಬಾರಿಯ ದಸರಾ ಉತ್ತಮವಾಗಿ ಮೂಡಿಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಬಿ. ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ರಚನೆಯಾಗಲಿದೆ. ನಮ್ಮ‌ ಸರ್ಕಾರದಿಂದ ರಾಜ್ಯದಿಂದ ಸಾಕಷ್ಟು ಅಭಿವೃದ್ಧಿ ಆಗಲಿದೆ. ನಾವು ಯಾವುದೆ ವಾಮಮಾರ್ಗದಿಂದ ಅಧಿಕಾರಕ್ಕೆ‌ ಬಂದಿಲ್ಲ. ಶಾಸಕರ ರಕ್ಷಣೆಗಾಗಿ ರೆಸಾರ್ಟ್ ನಲ್ಲಿ ಇದ್ದೂ ಅಷ್ಟೆ.ರೆಸಾರ್ಟ್ ರಾಜಕಾರಣಿ ಹೊಸದೇನಲ್ಲ ಎಂದರು. : – – -- .- -