ನನ್ನ ಮಾನ ಹರಾಜು ಹಾಕಲು ಈ ರೀತಿ ಮಾಡಿದ್ದಾರೆ- ಸದನದಲ್ಲೇ ಕಣ್ಣೀರು ಹಾಕಿದ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ… ಬೆಂಗಳೂರು,ಜು,22,2019(..): ತಮ್ಮ ವಿರುದ್ದದ ಅಕ್ಷೇಪಾರ್ಹ ವಿಡಿಯೋವೊಂದು ವೈರಲ್ ಆಗಿದ್ದ ಕುರಿತು ಇಂದು ಸದನದಲ್ಲಿ ಭಾವುಕಾರದ ಬಿಜೆಪಿ ಶಾಸಕರ ಅರವಿಂದ ಲಿಂಬಾವಳಿ, ನನ್ನ ಮಾನ ಹರಾಜು ಹಾಕಲು ಈ ರೀತಿ ಮಾಡಿದ್ದಾರೆ. ಈ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಿದರು. ವಿಧಾನಸಭೆಯಲ್ಲಿ ಇಂದು ಸದನ ಕಲಾಪದಲ್ಲಿ ಶಾಸಕ ಎಟಿ ರಾಮಸ್ವಾಮಿ ಮಾತನಾಡುತ್ತಿದ್ದರು. ತಮ್ಮ ವಿರುದ್ದದ ಅಕ್ಷೇಪಾರ್ಹ ವಿಡಿಯೋ ವಿಚಾರದ ಬಗ್ಗೆ ಭಾವುಕರಾಗಿ ಕಣ್ಣೀರು ಹಾಕಿದ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ, ನನ್ನ ಮಾನ ಹರಾಜು ಹಾಕಬೇಕೆಂದು ಈ ರೀತಿ ಮಾಡಿದ್ದಾರೆ. ಈ ರೀತಿ ವಾಮಮಾರ್ಗದಲ್ಲಿ ಶಾಸಕರನ್ನ ನಿಯಂತ್ರಿಸಬಹುದಾ. ಇಂದು ನನ್ನ ಬಗ್ಗೆ ಆಗಿದೆ. ನಾಳೆ ಇನ್ನೊಬ್ಬರ ಬಗ್ಗೆ ಆಗುತ್ತೆ. ಇದು ಯಾರೇ ಮಾಡಿರಲಿ. ಕೈಜೋಡಿಸಿರಲಿ ಇದರ ಬಗ್ಗೆ ತನಿಖೆಯಾಗಬೇಕು ಎಂದು ಅಸಮಾಧಾನ ಹೊರ ಹಾಕಿದರು. ಇದೇ ವೇಳೆ ಅರವಿಂದ ಲಿಂಬಾವಳಿ ಅವರನ್ನ ಸಮಾಧಾನಪಡಿಸಿದ ಸ್ಪೀಕರ್ ರಮೇಶ್ ಕುಮಾರ್, ಎಲ್ಲರ ವೈಯಕ್ತಿಕ ಬದುಕಿನಲ್ಲಿ ಇಂತಹವು ಬರುತ್ತದೆ. ನೀವು ಕಣ್ಣೀರು ಹಾಕಬಾರದು ಧೃತಿಗೆಡಬಾರದು. ಸಮಾಧಾನದಿಂದಿರಿ ಎಂದರು. : - - – : . . . . . : . ’ . ’ . ’ .