ನಿಯಮ ಉಲ್ಲಂಘಿಸಿದರೆ ಇನ್‌ಸ್ಟಾಗ್ರಾಂ ಅಕೌಂಟ್‌ಶಾಶ್ವತ ಬ್ಯಾನ್ ! ಬೆಂಗಳೂರು, ಜುಲೈ 21, 2019 (..):ಇನ್‌ಸ್ಟಾಗ್ರಾಂ ಅಕೌಂಟ್‌ಗಳನ್ನು ಬ್ಲಾಕ್‌ ಮಾಡುವುದರ ವಿರುದ್ಧ ವಿಶ್ವದಾದ್ಯಂತ ಬಳಕೆದಾರರು ಪ್ರತಿಭಟನೆ ನಡೆಸುತ್ತಿದ್ದಾರೆ. ‘ನೀತಿ ಉಲ್ಲಂಘಿಸಿರುವುದಕ್ಕೆ ( ) ಯಾವುದೇ ಸ್ಪಷ್ಟ ಕಾರಣವಿಲ್ಲ ( ) ಎಂಬುದನ್ನು ಮುಂದಿಟ್ಟುಕೊಂಡು ಇನ್‌ಸ್ಟಾಗ್ರಾಂ ಬಳಕೆದಾರರ ಅಕೌಂಟ್‌ಗಳನ್ನು ಬ್ಲಾಕ್‌ ಮಾಡುತ್ತಿತ್ತು. ಸದ್ಯ ಪೋಟೋ ಮೆಸೇಜಿಂಗ್‌ ಪ್ಲಾಟ್‌ಫಾರ್ಮ್‌ ಆಗಿರುವ ಇನ್ಸ್‌ಟಾಗ್ರಾಂ ಬಳಕೆದಾರರ ಪ್ರತಿಭಟನೆಯಿಂದ ಅಕೌಂಟ್‌ ಡಿಲೀಟ್‌ಗೂ ಮುನ್ನ ಬಳಕೆದಾರರಿಗೆ ಎಚ್ಚರಿಕೆ ನೀಡಲು ಮುಂದಾಗಿದೆ.