ಸಿನಿಮಾಟೋಗ್ರಫರ್ ಜತೆ ಪ್ರಿಯಾ ವಾರಿಯರ್ ‘ಮುತ್ತಿನ ಆಟ’ ವೀಡಿಯೋ ವೈರಲ್ ! ಬೆಂಗಳೂರು, ಜುಲೈ 20, 2019 (..):ಖ್ಯಾತ ಛಾಯಾಗ್ರಾಹಕ ಸೀನು ಸಿದ್ಧಾರ್ಥ್ ಜೊತೆಗಿನ ರೋಮ್ಯಾಂಟಿಕ್ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ ಪ್ರಿಯಾ ವಾರಿಯರ್. ಒರು ಅದಾರ್ ಲವ್ ಸಿನಿಮಾದ ಚಿತ್ರೀಕರಣದ ಘಟನೆಯನ್ನ ನೆನಪಿಸಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ಸಿನಿಮಾಟೋಗ್ರಫರ್ ಸೀನು ಸಿದ್ಧಾರ್ಥ್ ಅವರು ಪ್ರಿಯಾ ವಾರಿಯರ್ ತುಟಿಗೆ ಚುಂಬಿಸಲು ಮುಂದಾಗುತ್ತಾರೆ. ಇನ್ನೇನು ಚುಂಬಿಸಿದರು ಎನ್ನುವಷ್ಟರಲ್ಲಿ ಇನ್ನೊಂದು ಕೈಯಲ್ಲಿದ್ದ ಬಾಟಲ್ ತಗೊಂಡು ನೀರು ಕುಡಿಯುತ್ತಾರೆ. ಇದರಿಂದ ಪ್ರಿಯಾ ವಾರಿಯರ್ ಬೇಸರವಾದಂತೆ ಎಕ್ಸ್ ಪ್ರೆಶನ್ ಕೊಡ್ತಾರೆ ಈ ವೀಡಿಯೋ ಸಾಕಷ್ಟು ವೈರಲ್ ಆಗಿದೆ.