ವೇಶ್ಯಾವಾಟಿಕೆ ಅಡ್ಡೆ ಮೇಲೆ ಸಿಸಿಬಿ ಪೊಲೀಸರ ದಾಳಿ: ಐವರು ಆರೋಪಿಗಳು ಅರೆಸ್ಟ್… ಮೈಸೂರು,ಜು,18,2019(..): ವೇಶ್ಯಾವಾಟಿಕೆ ಅಡ್ಡೆ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ ಐವರು ಆರೋಪಿಗಳನ್ನ ಬಂಧಿಸಿದ್ದಾರೆ. ರಘುನಂದನ್, ಶ್ವೇತಾ, ಪ್ರದೀಪ್, ಸತೀಶ್ ಮತ್ತು ಮೋಹನ್ ಕುಮಾರ್ ಬಂಧಿತರು. ಮೈಸೂರಿನ ವಿವಿ ಪುರಂ ಪೋಲಿಸ್ ಠಾಣಾ ವ್ಯಾಪ್ತಿಯ ಗೋಕುಲಂನಲ್ಲಿರುವ ದಿ ಆಲೀವ್ ಶೈನ್ ಹೋಟೆಲ್‌ನಲ್ಲಿ ಸ್ಪಾಪ್ ನೆಪದಲ್ಲಿ ದಂಧೆ ನಡೆಯುತ್ತಿತ್ತು. ಈ ಬಗ್ಗೆ ಮಾಹಿತಿ ಪಡೆದು ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಇನ್ನು ರಘುನಂದನ್, ಶ್ವೇತಾ ಮೇಲೆ ಈಗಾಗಲೇ ಮೈಸೂರಿನ ಲಷ್ಕರ್ ಹಾಗೂ ವಿಜಯನಗರ ಪೊಲೀಸ್ ಠಾಣೆಯಲ್ಲಿ ವೇಶ್ಯಾವಾಟಿಕೆ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾಗಿ ಶಿಕ್ಷೆ ಅನುಭವಿಸಿದ್ರು ಮತ್ತೇ ಆರೋಪಿಗಳು ದಂಧೆಗಿಳಿದಿದ್ದರು. ಪ್ರಕರಣದಲ್ಲಿ ಕೊಲ್ಕತ್ತಾ ಮೂಲದ ಇಬ್ಬರು ಮಹಿಳೆಯರ ರಕ್ಷಣೆ ಮಾಡಲಾಗಿದೆ. ಬಂಧಿತರಿಂದ 11,720ರೂ ಹಾಗೂ 6ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಕಾರ್ಯಾಚರಣೆ ವೇಳೇ ಸಿಸಿಬಿ ಪೊಲೀಸರಿಗೆ ವಿವಿ ಪುರಂ ಠಾಣೆ ಪೊಲೀಸರು ಸಾಥ್ ನೀಡಿದ್ದಾರೆ. : - - – –- -