ತಮಿಳು ‘ದಳಪತಿ’ ವಿಜಯ್​ ಬಿಗಿಲ್ ಚಿತ್ರದ ಹಾಡು ಲೀಕ್: ಸೋಷಿಯಲ್ ಮೀಡಿಯಾದಲ್ಲಿ ವೈರಲ್ ! ಬೆಂಗಳೂರು, ಜುಲೈ 19, 2019 (..):ದಳಪತಿ ವಿಜಯ್​ ನಟನೆಯ ಬಿಗಿಲ್ ಚಿತ್ರದ ಹಾಡೊಂದು ಬಿಡುಗಡೆ ಮುನ್ನವೇ ಸಾಮಾಜಿಕ ಜಾಲತಾಣದಲ್ಲಿ ಲೀಕ್​ ಆಗಿದೆ. ವಿಜಯ್​ ಮತ್ತು ನಯನ ತಾರಾ ನಟನೆಯ ಚಿತ್ರ ಬಿಗಿಲ್​. ಈ ಚಿತ್ರಕ್ಕೆ ವಿವೇಕ್​ ಬರೆದಿರುವ ‘ಸಿಂಗ ಪೆನ್ನೆ’ ಹೆಸರಿನ ಮೊಟಿವೇಷನಲ್​ ಸಾಂಗ್​​ ಸಾಮಾಜಿಕ ಜಾಲತಾಣದಲ್ಲಿ ಆಗಲೇ ಲೀಕ್​ ಆಗಿ ವೈರಲ್​​ ಆಗಿದೆ. ಸಂಗೀತ ಸಂಯೋಜನೆ ಖ್ಯಾತ ಮ್ಯೂಸಿಕ್​​ ಡೈರೆಕ್ಟರ್​​ ಎ.ಆರ್​ ರೆಹಮಾನ್ ಈ ಚಿತ್ರಕ್ಕಾಗಿ ಹಾಡಿದ್ದಾರೆ. ಮರ್ಸಲ್​ ಚಿತ್ರದಲ್ಲಿ ವಿಜಯ್​ ಹಾಗೂ ರೆಹಮಾನ್​ ಹಾಡಿರುವ ‘ಇಲ್ಲಾ ಪುಗಾಜುಮ್​ ಒರುವಾನುಕೆ’, ‘ಅಜಾಗಿಯಾ ತಮೀಜ್​ ಮಗನ್​’ ಹಾಗೂ ‘ಆಲಪೂರನ್​ ತಮೀಜನ್’​ ಹಾಡಿನಂತೆ ಈ ಹಾಡು ಕೂಡ ಮೋಟಿವೇಷನಲ್​​ ಆಗಿದೆ.