ಮಗುವಿನ ನಿರೀಕ್ಷೆಯಲ್ಲಿ ಶೃತಿ ಹರಿಹರನ್: 1.0 ಎಂದು ಹೆಸರಿಟ್ಟು ತಮ್ಮ ಬೇಬಿ ಶವರ್ ಫೋಟೋ ಹಂಚಿಕೊಂಡ ನಟಿ ಬೆಂಗಳೂರು:ಜುಲೈ-18:(..) ಸ್ಯಾಂಡಲ್ ವುಡ್ ನಟಿ ಶೃತಿ ಹರಿಹರನ್ ತಾಯಿಯಾಗುತ್ತಿದ್ದು, ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ತಾವು ಗರ್ಭಿಣಿಯಾಗಿರುವ ವಿಷಯವನ್ನು ಶೃತಿ ಸಾಮಾಜಿಕ ಜಾಲತಾಣಗಲ್ಲಿ ಫೋಟೋ ವೊಂದನ್ನು ಅಪ್ ಲೋಡ್ ಮಾಡುವ ಮೂಲಕ ಹಂಚಿಕೊಂಡಿದ್ದಾರೆ. ಶೃತಿ ಹರಿಹರನ್ ತಾವು ತಾಯಿಯಾಗುತ್ತಿರುವ ವಿಷವನ್ನು ಹಂಚಿಕೊಂಡ ಬೆನ್ನಲ್ಲೇ ತಮ್ಮ ಸೀಮಂತ ಕಾರ್ಯಕ್ರಮದ ಫೋಟೋ, ಸ್ಲೈ ಶೋ ವೀಡಿಯೊ, ಜತೆಗೆ ಫ್ರೆಂಡ್ಸ್ ಜತೆಗಿರುವ ಸಂತಸದ ಫೋಟೋಗಳನ್ನು ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ. ಶ್ರುತಿ ಬ್ಲರ್ ಆಗಿ ಕ್ಲಿಕ್ಕಿಸಿಕೊಂಡಿರುವ ತಮ್ಮ ಬೇಬಿ ಬಂಪ್ ಫೋಟೋವನ್ನು ಇನ್‍ಸ್ಟಾಗ್ರಾಮ್, ಫೇಸ್‍ಬುಕ್ ನಲ್ಲಿ ಪೋಸ್ಟ್ ಮಾಡಿದ್ದರು. “ಈ ಸರ್ಕಸ್‍ಗೆ ನಿನಗೆ ಸ್ವಾಗತ ಪುಟ್ಟ. ನಿನ್ನನ್ನು ನೋಡಲು ನಮಗೆ ಕಾಯಲು ಆಗುತ್ತಿಲ್ಲ. ನನ್ನೊಳಗಿನ ಹೃದಯ ಬಡಿತವನ್ನು ಜೀವನದಲ್ಲಿ ಆಲಿಸುವಾಗ, ಹೊಸ ಜೀವನದ ಪ್ರಾರಂಭವಾಗುತ್ತಿದೆ ಎಂಬುದು ಅರಿವಾಗುವಾಗ, ಈ ಕ್ಷಣವನ್ನು ಅನುಭವಿಸುವಾಗ, ನಿನ್ನನ್ನು ನೋಡಲು ಹೆಚ್ಚು ಕಾಯಲು ಆಗುತ್ತಿಲ್ಲ, ನಿನ್ನ ತಂದೆ ರಾಮ್ ಕಳಾರಿ ಉತ್ಸುಕರಾಗಿದ್ದಾರೆ” ಎಂದು ಬರೆದುಕೊಂಡಿದ್ದರು. ಇದೀಗ ಬೇಬಿ ಶವರ್ ಸ್ಲೈಡ್ ಶೋ ಹಂಚಿಕೊಂಡಿದ್ದಾರೆ. ಸ್ಲೈಡ್ ಶೋಗೆ ಬೇಬಿ ಶವರ್ 1.0 ಎಂದು ಹೆಸರಿಟ್ಟಿದ್ದಾರೆ. ಮುಖ್ಯವಾಗಿ ಕೇಕ್ ಕತ್ತರಿಸಿ ಸವಿದಿದ್ದು, ತಮ್ಮ ನೆಚ್ಚಿನ ಮೊಸರನ್ನದ ಬಗ್ಗೆಯೂ ಬರೆದುಕೊಂಡಿದ್ದಾರೆ. ನಟ ಅರ್ಜುನ್​ ಸರ್ಜಾ ವಿರುದ್ಧ ಮೀಟೂ ಆರೋಪ ಮಾಡಿದ ಬಳಿಕ ಶ್ರುತಿ ಹರಿಹರನ್ ಹಲವು ದಿನಗಳಿಂದ ಚಿತ್ರರಂಗದಿಂದ ದೂರ ಉಳಿದಿದ್ದು, ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಶ್ರುತಿ ಎಲ್ಲಿ ಹೋದಳು ಎಂದು ಅಭಿಮಾನಿಗಳು ಹುಡುಕುತ್ತಿರುವ ನಡುವೆಯೇ ಶ್ರುತಿ ತಾನು ಗರ್ಭಿಣಿಯಾಗಿರುವುದನ್ನು ಫೇಸ್​ಬುಕ್​ ಮೂಲಕ ಸಂತಸ ಹಂಚಿಕೊಂಡಿದ್ದಾರೆ. ಶ್ರುತಿ ಅವರ ಪತಿ ರಾಮ್ ಕುಮಾರ್ ಕೇರಳ ಮೂಲದವರಾಗಿದ್ದು, ಕಳರಿಪಯಟ್ಟು ಪಟು. ಇವರಿಬ್ಬರೂ ಗೊಮ್ಟೇಶ್ ಉಪಾಧ್ಯೆ ನಿರ್ದೇಶನದಲ್ಲಿ ಮೂಡಿಬಂದಿದ್ದ ಒಂದೇ ಮ್ಯೂಸಿಕ್ ವೀಡಿಯೋ ಆಲ್ಬಂನಲ್ಲಿ ನಟಿಸಿದ್ದರು.