ಹೋಟೆಲ್ ನಿಂದ ಹೊರಹೋಗಿ ಕಾಂಗ್ರೆಸ್ ನಾಯಕರ ಸಂಪರ್ಕಕ್ಕೆ ಸಿಗದ ‘ಕೈ’ ಶಾಸಕ..? ಬೆಂಗಳೂರು,ಜು,18,2019(..): ಸಿಎಂ ಹೆಚ್.ಡಿ ಕುಮಾರಸ್ವಾಮಿ ಇಂದು ವಿಧಾನಸಭೆಯಲ್ಲಿ ವಿಶ್ವಾಸಮತಯಾಚನೆ ಮಾಡಲಿದ್ದು ಸಮ್ಮಿಶ್ರ ಸರ್ಕಾರದ ಅಳಿವು ಉಳಿವು ಇಂದು ನಿರ್ಧಾರವಾಗಲಿದೆ. ಈ ಮಧ್ಯೆ ಕಾಂಗ್ರೆಸ್ ನ ಮತ್ತೊಬ್ಬ ಶಾಸಕ ವಿಶ್ವಾಸಮತಯಾಚನೆ ವೇಳೆ ಕೈಕೊಡುವ ಸಾಧ್ಯತೆ ಕಂಡು ಬಂದಿದೆ. ಹೌದು, ಕಾಗವಾಡ ಕಾಂಗ್ರೆಸ್​​ ಶಾಸಕ ಶ್ರೀಮಂತ ಪಾಟೀಲ್ ರೆಸಾರ್ಟ್​ನಿಂದ ನಾಪತ್ತೆಯಾಗಿದ್ದಾರೆ ಎನ್ನಲಾಗಿದ್ದು, ಇದೀಗ ಕಾಂಗ್ರೆಸ್‌ ಗೆ ಮತ್ತೊಂದು ಶಾಕ್ ಕೊಟ್ಟಂತಾಗಿದೆ. ಕಳೆದ ಎರಡು ದಿನಗಳಿಂದ ತಾಜ್​ ವಿವಾಂತ ಹೋಟೆಲ್​ನಲ್ಲಿದ್ದ ಕಾಂಗ್ರೆಸ್​ ಶಾಸಕರನ್ನ ನಿನ್ನೆ ದೇವನಹಳ್ಳಿ ಸಮೀಪದ ಪ್ರಕೃತಿ ರೆಸಾರ್ಟ್​ಗೆ ಶಿಫ್ಟ್​ ಮಾಡಲಾಗಿತ್ತು. ಈ ನಡುವೆ ನಿನ್ನೆ ರಾತ್ರಿ ಮಾತ್ರೆ ಖಾಲಿಯಾಗಿದೆ ತರಬೇಕು ಎಂದು ಶ್ರೀಮಂತ ಪಾಟೀಲ್ ಹೊರಗೆ ಹೋಗಿದ್ದು , ಅರ್ಧಗಂಟೆ ಬಳಿಕ ಕಾಂಗ್ರೆಸ್ ನಾಯಕರ ಸಂಪರ್ಕಕ್ಕೆ ಸಿಕ್ಕಿಲ್ಲ . ಶಾಸಕ ಶ್ರೀಮಂತ್ ಪಾಟೀಲ್ ಅವರ ಫೋನ್ ಸಹ ಸ್ವಿಚ್ ಆಫ್ ಆಗಿದೆ ಎನ್ನಲಾಗುತ್ತಿದೆ. ಹೀಗಾಗಿ ಇಂದು ನಡೆಯುವ ವಿಶ್ವಾಸ ಮತ ಯಾಚನೆ ವೇಳೆಯಲ್ಲಿ ಶಾಸಕ ಶ್ರೀಮಂತಪಾಟೀಲ್‌ ಕೈಕೊಡುವ ಸಾಧ್ಯತೆ ಇದೆ. : - - – – .