ಇಂದು ಸದನಕ್ಕೆ ಹಾಜರಾಗುತ್ತೇನೆ- ಶಾಸಕ ರಾಮಲಿಂಗರೆಡ್ಡಿ ಸ್ಪಷ್ಟನೆ ಬೆಂಗಳೂರು,ಜು,18,2019(..): ಇಂದು ನಡೆಯುವ ಸದನದಲ್ಲಿ ನಾನು ಹಾಜರಿರುತ್ತೇನೆ ಎಂದು ಶಾಸಕ ರಾಮಲಿಂಗರೆಡ್ಡಿ ಸ್ಪಷ್ಟನೆ ನೀಡಿದ್ದಾರೆ. ಇಂದು ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಸಚಿವ ರಾಮಲಿಂಗರೆಡ್ಡಿ, ಹೇಳುವುದನ್ನೆಲ್ಲಾ ಈಗಾಗಲೇ ಹೇಳಿ ಆಗಿದೆ. ಇಂದು ಸದನದಲ್ಲಿ ವಿಶ್ವಾಸಮತಯಾಚನೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದೇನೆ. ವಿಶ್ವಾಸಮತಯಾಚನೆಯಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಹೇಳಿದರು. ಈಗಾಗಲೇ ರಾಮಲಿಂಗರೆಡ್ಡಿ ಅವರು ಲಕ್ಕಸಂದ್ರದಲ್ಲಿರುವ ನಿವಾಸದಿಂದ ವಿಧಾನಸೌಧದತ್ತ ತೆರಳಿದ್ದಾರೆ. : –-- -.