ಶಾಸಕರು ನಾಪತ್ತೆ: ದಯವಿಟ್ಟು ಹುಡುಕಿಕೊಡಿ: ಸ್ಪೀಕರ್ ಗೆ ಮೂರು ಕ್ಷೇತ್ರದ ಮತದಾರರಿಂದ ದೂರು… ಬೆಂಗಳೂರು,ಜು,17,2019(..): ತಮ್ಮ ಕ್ಷೇತ್ರದ ಶಾಸಕರು ಕಾಣೆಯಾಗಿದ್ದಾರೆ ದಯವಿಟ್ಟು ಅವರನ್ನ ಹುಡುಕಿಕೊಡಿ ಎಂದು ಮೂರು ಕ್ಷೇತ್ರದ ಮತದಾರರು ಸ್ಪೀಕರ್ ಗೆ ದೂರು ನೀಡಿದ್ದಾರೆ. ಸಮ್ಮಿಶ್ರ ಸರ್ಕಾರದ ವಿರುದ್ದ ಅಸಮಾಧಾನಗೊಂಡು ಮುಂಬೈನಲ್ಲಿ ಹೊಟೇಲ್ ನಲ್ಲಿ ವಾಸ್ತವ್ಯ ಹೂಡಿರುವ ಅತೃಪ್ತ ಶಾಸಕರ ವಿರುದ್ದ ಈಗಾಗಲೇ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಈ ಮಧ್ಯೆ ಯಶವಂತಪು ಕ್ಷೇತ್ರದ ಶಾಸಕ ಎಸ್​.ಟಿ ಸೋಮಶೇಖರ್, ಆರ್. ಆರ್. ನಗರ ಕ್ಷೇತ್ರದ ಶಾಸಕ ಮುನಿರತ್ನ, ಕೆ.ಆರ್ ಪುರಂ ಕ್ಷೇತ್ರದ ಶಾಸಕ ಬೈರತಿ ಬಸವರಾಜು ಕಾಣೆಯಾಗಿದ್ದಾರೆ, ಹುಡುಕಿ ಕೊಡಿ ಎಂದು ಅಯಾಕ್ಷೇತ್ರದ ಮತದಾರರು ಸ್ಪೀಕರ್ ಗೆ ದೂರು ನೀಡಿದ್ದಾರೆ. ಶಾಸಕರು ನಾಪತ್ತೆಯಾಗಿದ್ದು ಕ್ಷೇತ್ರದಲ್ಲಿ ಹಲವು ಸಮಸ್ಯೆಗಳಿವೆ. ಸಮಸ್ಯೆ ಬಗೆಹರಿಸಿಕೊಳ್ಳಲು ಶಾಸಕರು ಇಲ್ಲ. ನಾಪತ್ತೆಯಾಗಿದ್ದಾರೆ. ಕೂಡಲೇ ಶಾಸಕರನ್ನ ಹುಡುಕಿಕೊಡಿ ಎಂದು ಮತದಾರರು ಮನವಿ ಮಾಡಿದ್ದಾರೆ. ಹಾಗೆಯೇ ಅಥಣಿ ಕ್ಷೇತ್ರದ ಶಾಸಕರು ನಾಪತ್ತೆಯಾಗಿದ್ದಾರೆ ಹುಡುಕಿಕೊಡಿ ಎಂದು ಅಥಣಿ ಪೊಲೀಸ್ ಠಾಣೆಗೆ ಕಾಂಗ್ರೆಸ್ ಮುಖಂಡರು ದೂರು ನೀಡಿದ್ದಾರೆ. : - -- – – -