ಪೈಲ್ವಾನ್ ರಿಲೀಸ್ ಡೇಟ್ ಫಿಕ್ಸ್ ! ಆಗಸ್ಟ್ 29ಕ್ಕೆ ಥಿಯೇಟರ್’ಗೆ ಬೆಂಗಳೂರು, ಜುಲೈ 16, 2019 (..): ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ರಿಲೀಸ್ ಯಾವಾಗ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಆಗಸ್ಟ್ 8 ರಂದು ತೆರೆಗೆ ಬರಲು ಸಜ್ಜಾಗಿದ್ದ ಸಿನಿಮಾ ದಿನಾಂಕ ಬದಲಾಗಿದ್ದು, ಆಗಸ್ಟ್ 29ರಂದು ಚಿತ್ರಮಂದಿರಕ್ಕೆ ಎಂಟ್ರಿ ಕೊಡಲಿದೆ. ಕುರುಕ್ಷೇತ್ರ ಆಗಸ್ಟ್ 2ಕ್ಕೆ ಬಿಡುಗಡೆಯಾಗಲಿದೆ. ಹೀಗಾಗಿ ದಿನಾಂಕವನ್ನು ಮುಂದೂಡಲಾಗಿದೆ. ಇದೀಗ ಅಭಿಮಾನಿಗಳಿಗೆ ರಿಲೀಸ್ ದಿನಾಂಕವನ್ನು ಸ್ವತಃ ಚಿತ್ರತಂಡವೇ ಅಧಿಕೃತವಾಗಿ ಬಹಿರಂಗಪಡಿಸಿದೆ.