ಸ್ಪೀಕರ್ ರಮೇಶ್ ಕುಮಾರ್ ಕೂಡಲೇ ಕ್ಷಮೆಯಾಚಿಸಲಿ- ಸಂಸದೆ ಶೋಭಾ ಕರಂದ್ಲಾಜೆ ಆಗ್ರಹ… ಬೆಂಗಳೂರು,ಜು,15,2019(..): ಸ್ಪೀಕರ್ ರಮೇಶ್ ಕುಮಾರ್ ಎರಡು ಬಾರಿ ಅಸಂವಿಧಾನಿಕವಾಗಿ ಮಾತನಾಡಿದ್ದಾರೆ. ಹೀಗಾಗಿ ಅವರು ಕೂಡಲೇ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ. ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಂಸದೆ ಶೋಭಾಕರಂದ್ಲಾಜೆ, ಈ ಹಿಂದೆ ಸ್ಪೀಕರ್ ವೇಶ್ಯೆಯ ಬಗ್ಗೆ ಮಾತನಾಡಿದ್ದರು. ಗೌರವಯುತ ಪೀಠದಲ್ಲಿ ಕುಳಿತು ಅವರು ಆ ರೀತಿ ಮಾತನಾಡಬಾರದು. ಅವರು ಕೇವಲ ಕಾಂಗ್ರೆಸ್ ಏಜೆಂಟ್ ರಂತೆ ಮಾತನಾಡುತ್ತಿದ್ದಾರೆ. ಕೂಡಲೇ ಅವರು ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು. ಇದೇ ವೇಳೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ದ ಕಿಡಿಕಾರಿದ ಸಂಸದೆ ಶೋಭಾ ಕರಂದ್ಲಾಜೆ, ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ಶಾಸಕರನ್ನ ಭೇಟಿಗೆ ಅವಕಾಶ ನೀಡದೆ ದರ್ಪ ತೋರಿದ್ದರು. ಈಗ ಮುಂಬೈನಲ್ಲಿರುವ ಶಾಸಕರ ಭೇಟಿಗೆ ಗೋಗರಿಯುತ್ತಿದ್ದಾರೆ. ಸಮ್ಮಿಶ್ರ ಸರ್ಕಾರಕ್ಕೆ ಬಹುಮತ ಇಲ್ಲ. ಹೀಗಾಗಿ ಅವರು ರಾಜೀನಾಮೆ ಕೊಟ್ಟು ಹೋದರೇ ಗೌರವ ಇರುತ್ತದೆ ಎಂದು ಹರಿಹಾಯ್ದರು. : - –- -