ಎಂಟಿಬಿ ನಾಗರಾಜ್ ಅತೃಪ್ತರನ್ನ ಕರೆತರುತ್ತಾರೆ- ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿಕೆ.. ಬೆಂಗಳೂರು,ಜು,14,2019(..): ಶಾಸಕ ಎಂಟಿಬಿ ನಾಗರಾಜ್ ಅತೃಪ್ತ ಶಾಸಕರನ್ನ ಕರೆತರುತ್ತಾರೆ. ಊಹಾಪೂಹ ಬೇಡ ಕಾದು ನೋಡಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ತಿಳಿಸಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಇಂದು ಬೆಂಗಳೂರಿನಲ್ಲಿ ಅತೃಪ್ತ ಶಾಸಕ ರಾಮಲಿಂಗರೆಡ್ಡಿ ಅವರನ್ನ ಭೇಟಿಯಾಗಿ ಮನವೊಲಿಕೆಗೆ ಮುಂದಾದರು. ರಾಮಲಿಂಗರೆಡ್ಡಿ ಅವರ ಭೇಟಿ ಬಳಿಕ ಮಾತನಾಡಿದ ಈಶ್ವರ್ ಖಂಡ್ರೆ, ಕಾಂಗ್ರೆಸ್ ಕಷ್ಟದ ಸ್ಥಿತಿಯಲ್ಲಿದೆ. ಕಾಂಗ್ರೆಸ್ ಅನ್ನ ರಾಮಲಿಂಗರೆಡ್ಡಿ ಕಟ್ಟಿ ಬೆಳೆಸಿದ್ದಾರೆ. ಅವರ ಅವಶ್ಯಕತೆ ಪಕ್ಷಕ್ಕಿದೆ. ಹೀಗಾಗಿ ರಾಜೀನಾಮೆ ವಾಪಸ್ ಪಡೆಯುವಂತೆ ಮನವಿ ಮಾಡಿದ್ದೇವೆ ಎಂದರು. ರಾಮಲಿಂಗರೆಡ್ಡಿ ಅವರು ರಾಜೀನಾಮೆ ವಾಪಸ್ ಪಡೆಯುವ ವಿಶ್ವಾಸವಿದೆ. ಅತೃಪ್ತರನ್ನ ಎಂಟಿಬಿ ನಾಗರಾಜ್ ಕರೆತರುತ್ತಾರೆ ಎಂದು ಹೇಳಿದರು. : – –- -