ಥೈಲ್ಯಾಂಡ್ ನಲ್ಲಿ ಮೊಳಗಿತು ಕನ್ನಡದ ಬಾವುಟ: ಒಂದೇ ಟೂರ್ನಿಯಲ್ಲಿ ಆರು ಪ್ರಶಸ್ತಿಗಳಿಗೆ ಮುತ್ತಿಟ್ಟ ಮೈಸೂರಿನ ಪ್ರತಿಭೆ.. ಮೈಸೂರು,ಜು,12,2019(..): ವಿಶ್ವ 7ನೇ ಅಂತರರಾಷ್ಟ್ರೀಯ ಯೋಗ ಫೇಸ್ಟಿವೆಲ್ ನಲ್ಲಿ ಪಾಲ್ಗೊಂಡಿದ್ದ ಮೈಸೂರಿನ ಪ್ರತಿಭೆ ಕುವಲಾಶ್ವಾ .ಪಿ ಬರೋಬ್ಬರಿ ಆರು ಪ್ರಶಸ್ತಿ ಗೆಲ್ಲುವ ಮೂಲಕ ಥೈಲ್ಯಾಂಡ್ ನಲ್ಲಿ ಕನ್ನಡದ ಬಾವುಟ ಮೊಳಗಿಸಿದ್ದಾರೆ. ಮೈಸೂರಿ ಬೆಸ್ತಗೇರಿ ನಿವಾಸಿಯಾಗಿರುವ ಕುವಲಾಶ್ವಾ .ಪಿ ಅವರು ಕಳೆದ ಮೇ ನಲ್ಲಿ ಥೈಲ್ಯಾಂಡ್ ನಲ್ಲಿ ನಡೆದ ವಿಶ್ವ 7ನೇ ಅಂತರರಾಷ್ಟ್ರೀಯ ಯೋಗ ಫೇಸ್ಟಿವೆಲ್ ನಲ್ಲಿ ಪಾಲ್ಗೊಂಡಿದ್ದರು. ಎರಡು ದಿನಗಳ ಕಾಲ ನಡೆದ ಕೂಟದಲ್ಲಿ ಒಂದೇ ಟೂರ್ನಿಯಲ್ಲಿ ಕುವಲಾಶ್ವ 6 ಪ್ರಶಸ್ತಿಗಳಿಗೆ ಮುತ್ತಿಡುವ ಮೂಲಕ ಯೋಗದಲ್ಲಿ ಸಾಧನೆ ಮಾಡಿದ್ದಾರೆ. ಭಾರತದಿಂದ ತೆರಳಿದ್ದ 150 ಮಂದಿಯಲ್ಲಿ ಕುವಲಾಶ್ವ ಅತ್ಯಧಿಕ ಪ್ರಶಸ್ತಿ ಪಡೆದಿದ್ದಾರೆ. ತನ್ನ ದೃಷ್ಟಿದೋಷ ನಿವಾರಣೆಗಾಗಿ ಯೋಗ ಪ್ರಾರಂಭಿಸಿದ್ದ ಕುವಲಾಶ್ವ ಇಂದು ಯೋಗದಿಂದ ತನ್ನೆಲ್ಲಾ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ. ಇವರ ತಂದೆ ಟಿ.ಪರಶುರಾಮ ಅವರು ಮೈಸೂರು ಅರಮನೆಯ ಪೋಲಿಸ್ ಇಲಾಖೆಯಲ್ಲಿ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಆರ್ಥಿಕ ಸಂಕಷ್ಟದ ನಡುವೆಯೂ ಕುವಲಾಶ್ವ ಥೈಲ್ಯಾಂಡ್ ಗೆ ಹೋಗಿದ್ದರು. ಇದೀಗ ಮಗನ ಸಾಧನೆಯಿಂದ ಕುವಲಾಶ್ವ ಕುಟುಂಬ ಫುಲ್ ಖುಷಿಯಾಗಿದ್ದಾರೆ. : - – – -