ಮಂಡ್ಯದಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಲು ಗಂಡಸರಿಲ್ವಾ..? ಕಾಂಗ್ರೆಸ್ ಶಾಸಕ ವಾಗ್ದಾಳಿ. ಮಂಡ್ಯ,ಫೆಬ್ರವರಿ,8,2024(..):ಈ ಬಾರಿಯೂ ಮಂಡ್ಯ ಲೋಕಸಭಾ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಬಗ್ಗೆ ಚರ್ಚೆಯಾಗುತ್ತಿದ್ದು ಈ ಕುರಿತು ಕಾಂಗ್ರೆಸ್ ಶಾಸಕ ಕದಲೂರು ಉದಯ್ ಪ್ರತಿಕ್ರಿಯಿಸಿ, ಮಂಡ್ಯದಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಲು ಗಂಡಸರಿಲ್ವಾ. ? ಲೀಡರ್ ಮಕ್ಕಳೇ ಇಲ್ಲಿ ಚುನಾವಣೆಗೆ ನಿಲ್ಲಬೇಕಾ? ಎಂದು ವಾಗ್ದಾಳಿ ನಡೆಸಿದರು. ಈ ಕುರಿತು ಮಾತನಾಡಿದ ಶಾಸಕ ಕದಲೂರು ಉದಯ್, ಮಂಡ್ಯ, ಮದ್ದೂರಿನಲ್ಲಿ ಗಂಡಸರು ಇಲ್ವಾ? ಬೇರೆ ಜಿಲ್ಲೆಯವರು ಯಾಕೆ ಬರಬೇಕು? ಜಿಲ್ಲೆಯ ಜೆಡಿಎಸ್​​ನಲ್ಲಿ () ಸಮರ್ಥರಿಲ್ವಾ. ಅವರ ಕುಟುಂಬದವರೇ ಜಿಲ್ಲೆಗೆ ಬರಬೇಕಾ ಯಾರು ಬಂದರೂ ಎದುರಿಸಲು ನಮ್ಮ ಕಾಂಗ್ರೆಸ್​ನಲ್ಲಿ ಸಿದ್ಧರಿದ್ದೇವೆ ಎಂದರು. ಜನರ ಸೇವೆ ಮಾಡುವವರು ಕ್ಷೇತ್ರದಲ್ಲಿ ನಿರಂತರವಾಗಿ ಇರಬೇಕು. ಐದು ವರ್ಷದಿಂದ ನಿಖಿಲ್ ಕುಮಾರಸ್ವಾಮಿ ಎಲ್ಲಿ ಹೋಗಿದ್ರು? ಚುನಾವಣೆ ಬಂದಾಗ ಬರೋಕೆ ಜನ ದಡ್ಡರಲ್ಲ ಎಂದು ಹರಿಹಾಯ್ದರು. : – – - –- -