ವಿಶ್ವಕಪ್ ಕ್ರಿಕೆಟ್: ಯಾರೇ ಗೆದ್ದರೂ ಐತಿಹಾಸಿಕ ದಾಖಲೆ ಲಂಡನ್, ಜುಲೈ 12, 2019 (..): ಹಾಲಿ ಐಸಿಸಿ ವಿಶ್ವಕಪ್ ಟೂರ್ನಿ ಹಲವು ಅನಿರೀಕ್ಷಿತ ಫಲಿತಾಂಶಗಳಿಗೆ ವೇದಿಕೆಯಾಗಿದೆ. ಇದೀಗ ಐತಿಹಾಸಿಕ ದಾಖಲೆಯೊಂದಕ್ಕೆ ವೇದಿಕೆ ಕಲ್ಪಿಸುತ್ತಿದೆ. ಭಾರತವನ್ನು ಮಣಿಸಿದ ನ್ಯೂಜಿಲೆಂಡ್ ಮತ್ತು ಪ್ರಬಲ ಆಸ್ಟ್ರೇಲಿಯಾವನ್ನು ಮಣಿಸಿದ ಇಂಗ್ಲೆಂಡ್ ತಂಡ ವಿಶ್ಪಕಪ್ ಫೈನಲ್ ಪ್ರವೇಶ ಮಾಡಿದೆ. ಈ ಎರಡೂ ತಂಡಗಳಲ್ಲಿ ಯಾವುದೇ ತಂಡ ಫೈನಲ್ ನಲ್ಲಿ ಜಯ ಗಳಿಸಿದರೂ, ನೂತನ ಇತಿಹಾಸ ನಿರ್ಮಾಣವಾಗಲಿದೆ. ಇಂಗ್ಲೆಂಡ್ 1992ರ ಬಳಿಕ ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದೆ.