ಈ ವಾರ ವಿಕೆಂಡ್ ವಿತ್ ರಮೇಶ್ ಸಮಾಪ್ತಿ ಬೆಂಗಳೂರು, ಜುಲೈ 12, 2019 (..): ಈ ಸೀಸನ್ ನ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಸಮಾಪ್ತಿಯಾಗುತ್ತಿದೆ. ಅಂತಿಮ ಸಂಚಿಕೆಯ ಚಿತ್ರೀಕರಣ ಮುಗಿದಿದೆ. ಈ ವಾರವೇ ಅಂತಿಮ ಎಪಿಸೋಡ್ ಪ್ರಸಾರವಾಗಲಿದೆ. ಈ ಬಾರಿಯೂ ಪ್ರೇಕ್ಷಕರು ಬಯಸಿದ ಎಲ್ಲಾ ಅತಿಥಿಗಳನ್ನು ಕರೆತರಲು ಜೀ ಕನ್ನಡ ವಾಹಿನಿಗೆ ಸಾಧ್ಯವಾಗಿಲ್ಲ. ಸ್ಯಾಂಡಲ್ ವುಡ್ ಸಾಧಕರನ್ನೇ ಹೆಚ್ಚಾಗಿ ಕರೆತರಲಾಗುತ್ತಿದೆ ಎಂಬ ಆಪಾದನೆಗಳ ನಡುವೆಯೂ ಸೀಸನ್ 4 ಕೊನೆಗೊಳ್ಳಲಿದೆ.