ಮಡಿಕೇರಿಯಲ್ಲಿ ಶೀಘ್ರವೇ ಎಮರ್ಜೆನ್ಸಿ ಹಾಸ್ಪಿಟಲ್ ತೆರೆಯುವಂತೆ ಕೇಂದ್ರ ಸಚಿವರಿಗೆ ಮನವಿ ಮಾಡಿದ ಸಂಸದ ಪ್ರತಾಪ್ ಸಿಂಹ… ನವದೆಹಲಿ,ಜು,11,2019(..): ಮಡಿಕೇರಿಯಲ್ಲಿ ಶೀಘ್ರವೇ ಎಮರ್ಜೆನ್ಸಿ ಹಾಸ್ಪಿಟಲ್ ತೆರೆಯುವಂತೆ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರಿಗೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಮನವಿ ಮಾಡಿದರು. ಕಳೆದ ಲೋಕಸಭಾ ಚುನಾವಣೆಗೂ ಮುನ್ನ ಮಡಿಕೇರಿಯಲ್ಲಿ ಎಮರ್ಜೆನ್ಸಿ ಹಾಸ್ಪಿಟಲ್ ತೆರೆಯುವಂತೆ ಮತದಾರರು ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆ ಇಂದು ಸಚಿವರಾದ ಸದಾನಂದ ಗೌಡ ಪಿಯುಷ್ ಘೋಯಲ್, ಶಾಸಕ ಅಪ್ಪಚ್ಚುರಂಜನ್ ಹಾಗೂ ಸಂಸದ ತೇಜಸ್ವಿ ಸೂರ್ಯ , ಪ್ರತಾಪ್ ಸಿಂಹ ನಿಯೋಗ ಇಂದು ಕೇಂದ್ರ ಆರೋಗ್ಯ ಖಾತೆ ಸಚಿವ ಡಾ.ಹರ್ಷವರ್ಧನ್ ಅವರನ್ನು ಭೇಟಿ ಮಾಡಿ ಮಡಿಕೇರಿಯಲ್ಲಿ ಎಮರ್ಜೆನ್ಸಿ ಹಾಸ್ಪಿಟಲ್ ತೆರೆಯುವ ಸಂಬಂಧವಾಗಿ ಮನವಿ ಮಾಡಿದರು. : - – – - –