ಸಚಿವ ಡಿ.ಕೆ ಶಿವಕುಮಾರ್ ರನ್ನ ವಶಕ್ಕೆ ಪಡೆದ ಮುಂಬೈ ಪೊಲೀಸರು… ಮುಂಬೈ,ಜು,10,2019(..): ಅತೃಪ್ತ ಶಾಸಕರನ್ನ ಮನವೊಲಿಸಲು ಮುಂಬೈಗೆ ತೆರಳಿ ಅಲ್ಲಿನ ರೆನೈಸೆನ್ಸ್ ಹೋಟೆಲ್ ಮುಂದೆಯೇ ಕುಳಿತಿದ್ದ ಸಚಿವ ಡಿ.ಕೆ ಶಿವಕುಮಾರ್ ಅವರನ್ನ ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮುಂಬೈನ ರೆನೈಸೆನ್ಸ್ ಹೊಟೇಲ್‍ ನಲ್ಲಿ ವಾಸ್ತವ್ಯ ಹೂಡಿರುವ ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಅತೃಪ್ತ ಶಾಸಕರನ್ನ ಮನವೊಲಿಸುಲು ಹೋಟೆಲ್ ಗೆ ತೆರಳಿದ್ದ ಸಚಿವ ಡಿ.ಕೆ ಶಿವಕುಮಾರ್ ಅವರನ್ನ ಮುಂಬೈ ಪೊಲೀಸರು ತಡೆದಿದ್ದರು. ಅತೃಪ್ತ ಶಾಸಕರ ಭೇಟಿಗೆ ಅವಕಾಶಕ್ಕೆ ನೀಡಿರಲಿಲ್ಲ. ಈ ಹಿನ್ನೆಲೆ ಬೆಳಿಗ್ಗೆ 8.15 ರಿಂದಲೂ ಸಚಿವ ಡಿ.ಕೆ ಶಿವಕುಮಾರ್ ಹೋಟೆಲ್ ಮುಂದೆಯೇ ಕುಳಿತು ಶಾಸಕರನ್ನ ವಾಪಸ್ ಕರೆದೊಯ್ಯುವವರೆಗೂ ಇಲ್ಲಿಂದ ಕದಲಲ್ಲ ಎಂದು ಪಟ್ಟು ಹಿಡಿದಿದ್ದರು. ಸಚಿವ ಡಿ.ಕೆ ಶಿವಕುಮಾರ್ ಗೆ ಸಚಿವ ಜಿ.ಟಿ ದೇವೇಗೌಡ ಶಾಸಕ ಶಿವಲಿಂಗೇಗೌಡರು ಸಾಥ್ ನೀಡಿದ್ದರು. ಈ ನಡುವೆ ಇಂದು ಮುಂಬೈ ಪೊಲೀಸರು ಸಚಿವ ಡಿ.ಕೆ ಶಿವಕುಮಾರ್ ಅವರನ್ನ ವಶಕ್ಕೆ ಪಡೆದಿದ್ದಾರೆ. ಆದರೆ ಸಚಿವ ಜಿ.ಟಿ ದೇವೇಗೌಡರು, ಶಾಸಕ ಅಪ್ಪಾಜಿಗೌಡ ಅವರು ಹೋಟೆಲ್ ಮುಂದೆಯೇ ಕುಳಿತಿದ್ದು ಅವರ ಮುಂದಿನ ನಡೆ ಏನೆಂಬುದು ತಿಳಿದು ಬರಬೇಕಿದೆ. : - – –