ಸಚಿವ ಯುಟಿ ಖಾದರ್ – ಶಾಸಕ ರೇಣುಕಾಚಾರ್ಯ ನಡುವೆ ಕಿತ್ತಾಟ… ಬೆಂಗಳೂರು,ಜು,10,2019(..): ವಿಧಾನಸೌಧದ ಮುಂದೆ ಶಾಸಕ ರೇಣುಕಾಚಾರ್ಯ ಹಾಗೂ ಸಚಿವ ಯು.ಟಿ ಖಾದರ್‌ ಅವರು ಕಿತ್ತಾಟ ನಡೆಸಿರುವ ಘಟನೆ ನಡೆದಿದೆ. ವಿಧಾನಸೌಧದ ಮುಂಭಾಗದಲ್ಲಿ ರೇಣುಕಾಚಾರ್ಯ ಸೇರಿದಂತೆ ಬಿಜೆಪಿ ನಾಯಕರು ಪ್ರತಿಭಟನೆ ನಡೆಸುತ್ತಿದ್ದರು, ಈ ವೇಳೆ ಆಗಮಿಸಿದ ಯು.ಟಿ ಖಾದರ್‌ ಬಿಜೆಪಿ ವಿರುದ್ದ ಗರಂ ಆಗಿದ್ದಾರೆ. ಈ ಸಂದರ್ಭದಲ್ಲಿ ಅಲ್ಲೇ ಇದ್ದ ಶಾಸಕ ರೇಣುಕಾಚಾರ್ಯ ನಿಮಗೆ ನಾಚಿಕೆ ಆಗಬೇಕು ಕಿಡಿಕಾರಿದ್ದಾರೆ. ಈ ನಡುವೆ ಇಬ್ಬರ ನಡುವೆ ಜಗಳ ನಡೆದಿದೆ. ಈ ಮೂಲಕ ರಾಜ್ಯ ರಾಜಕೀಯದಲ್ಲಿ ಹೈಡ್ರಾಮವೇ ನಡೆಯುತ್ತಿದ್ದು ಅಧಿಕಾರಕ್ಕೇರಲು ಬಿಜೆಪಿ ಅವಣಿಸುತ್ತಿದ್ದರೇ ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಜೆಡಿಎಸ್ ಕಾಂಗ್ರೆಸ್ ಯತ್ನಿಸುತ್ತಿದೆ. : – --