ವ್ಯಾಕರಣ ಮೇಸ್ಟ್ರು ದಾರಿ ತಪ್ಪಿಸುತ್ತಿದ್ದಾರೆ. ಬೇರೆಯವರಿಗೂ ಸ್ವಲ್ಪ ಕಾನೂನು ಗೊತ್ತಿದೆ : ಸಿದ್ದು ಕಾಲೆಳೆದ ಸುರೇಶ್ಕುಮಾರ್..! ಬೆಂಗಳೂರು, ಜು.09, 2019 : (.. ) ರಾಜೀನಾಮೆ ನೀಡಿರುವ ಶಾಸಕರ ವಿರುದ್ಧ ಕಾಂಗ್ರೆಸ್ ಪಕ್ಷ ಯಾವುದೇ ಶಿಸ್ತು ಕ್ರಮ ಜರುಗಿಸಲಾಗದು ಎಂದು ಬಿಜೆಪಿ ಶಾಸಕ ಸುರೇಶ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಈ ಸಂಬಂಧ ಫೇಸ್ ಬುಕ್ ನಲ್ಲಿ ಸ್ಟೇಟಸ್ ಬರೆದುಕೊಂಡಿರುವ ಸುರೇಶ್ ಕುಮಾರ್ ಹೇಳಿರುವುದಿಷ್ಟು…. ಆ ಕೆಲವು ಶಾಸಕರು ರಾಜಿನಾಮೆ ನೀಡಿರುವುದು ತಮ್ಮ ಶಾಸಕ ಸ್ಥಾನಕ್ಕೆ, ತಮ್ಮ ಪಕ್ಷಕ್ಕಲ್ಲ(ಕಾಂಗ್ರೆಸಿ ಗಲ್ಲ).ಯಾವುದೇ ಕಾರಣಕ್ಕೂ ಇದು ಪಕ್ಷಾಂತರ ವಿರೋಧಿ ಕಾಯ್ದೆ (- ) ಉಲ್ಲಂಘನೆಯಲ್ಲ.ಅವರ ವಿರುದ್ಧ ಯಾವುದೇ ಕ್ರಮ ಸಾಧ್ಯವಿಲ್ಲ. ವ್ಯಾಕರಣ ಮೇಸ್ಟ್ರು ದಾರಿ ತಪ್ಪಿಸುತ್ತಿದ್ದಾರೆ. ಬೇರೆಯವರಿಗೂ ಸ್ವಲ್ಪ ಕಾನೂನು ಗೊತ್ತಿದೆ. ——— : ----