ಅದಾಯಿ ಚಿತ್ರದ ಬೆತ್ತಲ ದೃಶ್ಯ ಹಾಗೂ ಚಿತ್ರರಂಗದಿಂದ ದೂರ ಸರಿಯಲು ನಿರ್ಧರಿಸಿದ್ದ ತಮ್ಮ ನಿಲುವಿನ ಬಗ್ಗೆ ಅಮಲಾ ಪೌಲ್ ಹೇಳಿದ್ದೇನು? ಚೆನ್ನೈ:ಜುಲೈ-8:(..) ಬಹುಭಾಷಾ ನಟಿ ಅಮಲಾ ಪುಲ್ ಅವರ ’ಅದಾಯಿ’ ಚಿತ್ರದ ಟೀಸರ್ ಇತ್ತೀಚೆಗೆ ಭಾರಿ ಸದ್ದು ಮಾಡಿತ್ತು. ಟೀಸರ್ ನಲ್ಲಿ ಅಮಲಾ ಸಂಪೂರ್ಣ ಬೆತ್ತಲಾಗಿ ಕಾಣಿಸಿಕೊಂಡಿದ್ದರು. ಅಮಲಾ ಪೌಲ್ ನಟನೆಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಇನ್ನು ಹಲವರು ಕಿಡಿಕಾರಿದ್ದರು. ಈಗ ಸ್ವತ: ಅಮಲಾ ಔಲ್ ಅದಾಯಿ ಚಿತ್ರ ಹಾಗೂ ಟೀಸರ್ ನಲ್ಲಿನ ಬೆತ್ತಲ ಡೃಶ್ಯಗಳ ಬಗ್ಗೆ ಸ್ಪಷ್ಟನೆ ನಿಡಿದ್ದು, ಇದೊಂದು ವಿಭಿನ್ನ ಪಾತ್ರವಾಗಿದ್ದರಿಂದ ಚಿತ್ರದಲ್ಲಿ ನಟಿಸಲು ಒಪ್ಪಿದ್ದಾಗಿ ತಿಳಿಸಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅಮಲಾ, ಅದಾಯಿ ಚಿತ್ರ ಹಾಗೂ ಅದರಲ್ಲಿನ ಪಾತ್ರ ಸಾಕಷ್ಟು ವಿಭಿನ್ನತೆಯಿಂದ ಕೂಡಿದೆ. ನಶೆಯಲ್ಲಿ ನಾಪತ್ತೆಯಾಗುವ ಮಗಳ ಪಾತ್ರದಲ್ಲಿ ನಟಿಸಿದ್ದೇನೆ. ಈ ರೀತಿಯ ಪಾತ್ರ ಮಾಡಲು ಕಾರಣ ಈ ಹಿಂದೆ ನಾನು ಅತ್ಯಾಚಾರ ಸಂತ್ರಸ್ತೆ, ಹೋರಾಟ ಮಾಡುವ ಮಹಿಳೆ, ತಂಗಿ ಹಾಗೂ ತಾಯಿಯ ಪಾತ್ರದಲ್ಲಿ ನಟಿಸಿ ಬೋರ್ ಆಗಿತ್ತು. ಇದರಿಂದ ನನಗೆ ಬೋರ್ ಆಗಿ ಚಿತ್ರರಂಗವನ್ನೇ ಬಿಡಲು ನಿರ್ಧರಿಸಿದ್ದೆ. ಈ ಸಂದರ್ಭದಲ್ಲಿ ಅದಾಯಿ ಚಿತ್ರದ ಕಥೆ ಬಗ್ಗೆ ನಿರ್ದೇಶಕರು ತಿಳಿಸಿದ್ದರು. ಕಥೆ ಕೇಳಿದಾಗ ಇದು ವಿಶೇಷ ಪಾತ್ರ ಅನಿಸಿತ್ತು. ಹಾಗಾಗಿ ಅಭಿನಯಿಸಲು ಒಪ್ಪಿಕೊಂಡೆ ಎಂದಿದ್ದಾರೆ. ’ಅದಾಯಿ’ ಚಿತ್ರದ ಸ್ಕ್ರಿಪ್ಟ್ ಓದಿದೆ. ವಿಶೇಷ ಎಂದರೆ ಈ ಚಿತ್ರ ತೆಲುಗು, ತಮಿಳು ಹಾಗೂ ಹಿಂದಿಯಲ್ಲಿ ಬಿಡುಗಡೆ ಆಗುತ್ತಿದೆ. ಹಾಗಾಗಿ ಈ ಸಿನಿಮಾ ಮಾಡಲು ನಾನು ಒಪ್ಪಿಕೊಂಡೆ. ಬಳಿಕ ನಿರ್ದೇಶಕ ರತ್ನ ಕುಮಾರ್ ಚಿತ್ರದ ಕತೆ ಬಗ್ಗೆ ಹೇಳಿ ಈ ಚಿತ್ರದಲ್ಲಿ ನಗ್ನ ದೃಶ್ಯ ಇದೆ. ಈ ಸೀನ್‍ಗಾಗಿ ವಿಶೇಷ ಕಾಸ್ಟ್ಯೂಮ್ ಧರಿಸಬಹುದು ಎಂದು ತಿಳಿಸಿದ್ದರು. ನಿರ್ದೇಶಕರಿಂದ ಯಾವುದೇ ವಿಶೇಷ ಕಾಸ್ಟ್ಯೂಮ್ ಪಡೆಯಲು ನಿರಾಕರಿಸಿದೆ. ಅಲ್ಲದೆ ಈ ದೃಶ್ಯ ಚಿತ್ರೀಕರಿಸಲು ಒಪ್ಪಿಕೊಂಡೆ. ಅಲ್ಲದೆ ಸಿನಿಮಾ ಸೆಟ್‍ನಲ್ಲಿ ಏನಾಗಬಹುದು ಎಂಬ ಕಾತುರ ಕೂಡ ಇತ್ತು. ಈ ದೃಶ್ಯ ಚಿತ್ರೀಕರಿಸುವಾಗ ಸಿನಿಮಾ ಸೆಟ್‍ನಲ್ಲಿ ಕೇವಲ 15 ಮಂದಿ ಇದ್ದರು. ಅಲ್ಲಿದ್ದ ಸಿಬ್ಬಂದಿ ಒಳ್ಳೆಯವರು. ಹೀಗಾಗಿ ಆ ದೃಶ್ಯ ಚೆನ್ನಾಗಿ ಬಂದಿದೆ ಎಂದು ಅಮಲಾ ತಿಳಿಸಿದ್ದಾರೆ. ‘ ,’ , , , , , .