ಯಾವುದೇ ಕಾರಣಕ್ಕೂ ಮೈತ್ರಿ ಸರ್ಕಾರ ಬೀಳಲ್ಲ: ಸಚಿವ ಸ್ಥಾನಕ್ಕೆ ತ್ಯಾಗಕ್ಕೆ ಸಿದ್ಧ ಎಂದ್ರು ಎಂಟಿಬಿ ನಾಗರಾಜ್… ಬೆಂಗಳೂರು,ಜು,8,2019(..): ಯಾವುದೇ ಕಾರಣಕ್ಕೂ ಸಮ್ಮಿಶ್ರ ಸರ್ಕಾರ ಬೀಳಲ್ಲ. ಸಿಎಂ ಬದಲಾವಣೆ ಬಗ್ಗೆ ಯಾರೂ ಹೇಳಿಲ್ಲ ಎಂದು ಸಚಿವ ಎಂಟಿಬಿ ನಾಗರಾಜ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಇಂದು ಮಾತನಾಡಿದ ಸಚಿವ ಎಂಟಿಬಿ ನಾಗರಾಜ್, ಬೆಂಗಳೂರು ಶಾಸಕರು ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ನೀಡಿದ್ದಾರೆ. ಇದಕ್ಕೂ ಸಿದ್ಧರಾಮಯ್ಯಗೂ ಸಂಬಂಧವಿಲ್ಲ. ಅವರನ್ನ ವಾಪಸ್ ಕರೆದುಕೊಂಡುವ ಬರುವ ಕೆಲಸವಾಗುತ್ತದೆ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಸೂಚಿಸಿದರೇ ರಾಜೀನಾಮೆ ನೀಡಲು ಸಿದ್ಧರಿದ್ದೇನೆ ಎಂದು ಹೇಳಿದರು. ಹಾಗೆಯೇ ಪಕ್ಷ ಉಳಿಸುವ ಬಗ್ಗೆ ಡಾ.ಸುಧಾಕರ್ ಜತೆ ಚರ್ಚಿಸಿದ್ದೇನೆ. ಭೈರತಿ ಬಸವರಾಜ್, ಸೋಮಶೇಖರ್ ಅವರ ಜತೆಯೂ ಚರ್ಚಿಸಿದ್ದೇನೆ. ಇನ್ನು ಎರಡು ಮೂರು ದಿನ ಟೈಮ್ ಬೇಕು ಎಂದಿದ್ದಾರೆ. ಅವರ ಮನಸ್ಸಿನಲ್ಲಿ ಏನಿದೆ ಅಂತಾ ಗೊತ್ತಿಲ್ಲ ಎಂದು ಸಚಿವ ಎಂಟಿಬಿ ನಾಗರಾಜ್ ತಿಳಿಸಿದರು. : - --