ಎಚ್.ವಿಶ್ವನಾಥ್ ವಿರುದ್ಧ ಜೆಡಿಎಸ್ ಕಾರ್ಯಕರ್ತರ ಆಕ್ರೋಶ: ಹುಣಸೂರಿನಲ್ಲಿ ಪ್ರತಿಭಟನೆ ಮೈಸೂರು, ಜುಲೈ 07, 2019 (..): ಶಾಸಕ ಸ್ಥಾನಕ್ಕೆ ಅಡಗೂರು ಎಚ್‌.ವಿಶ್ವನಾಥ್ ರಾಜೀನಾಮೆ ಹಿನ್ನೆಲೆಯಲ್ಲಿ ಹುಣಸೂರಿನಲ್ಲಿ ಜೆಡಿಎಸ್ ಕಾರ್ಯಕರ್ತರ ಪ್ರತಿಭಟನೆ ನಡೆಸಿದರು. ಪಕ್ಷದ ಕಾರ್ಯಕರ್ತರು ಶಾಸಕರ ವಿರುದ್ಧ ಅಸಮಾಧಾನ ಹೊರ ಹಾಕಿದ್ದು, ಅವರು ಯಾರನ್ನು ಕೇಳಿ ರಾಜೀನಾಮೆ ಕೊಟ್ಟರು ?ಗೆಲ್ಲೊಸೋಕೆ ನಾವು ಬೇಕು, ರಾಜೀನಾಮೆ ಕೊಡುವಾಗ ನಾವು ಬೇಡವೇ? ಎಂದು ಆಕ್ರೋಶ ವ್ಯಕ್ತಪಡಿಸಿದರು. ಹುಣಸೂರಿನ ಜೆಡಿಎಸ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಕನಿಷ್ಠ ಕಾರ್ಯಕರ್ತರ ಅಭಿಪ್ರಾಯ ಕೇಳದೇ ರಾಜೀನಾಮೆ ನೀಡಿದ್ದು ತಪ್ಪು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.