ಪೈಲ್ವಾನ್ ಬಿಡುಗಡೆ ದಿನಾಂಕ ಮತ್ತೆ ಮುಂದಕ್ಕೆ ?! ಬೆಂಗಳೂರು, ಜುಲೈ 06, 2019 (..): ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷೆಯ ಚಿತ್ರ ಪೈಲ್ವಾನ್ ಬಿಡುಗಡೆ ದಿನಾಂಕ ಮತ್ತಷ್ಟು ವಿಳಂಬವಾಗಲಿದೆ. ವರಮಹಾಲಕ್ಷ್ಮಿ ಹಬ್ಬಕ್ಕೆ ಚಿತ್ರ ಬಿಡುಗಡೆ ಎಂದು ಹೇಳಲಾಗುತ್ತಿತ್ತು. ಆದರೀಗ ದಿನಾಂಕ ಬದಲಾಗಿದೆ. ಸುದೀಪ್ ಹುಟ್ಟುಹಬ್ಬಕ್ಕೆ ಪೈಲ್ವಾನ್ ಬಿಡುಗಡೆಯಾಗಲಿದೆ ಎನ್ನಲಾಗಿದೆ. ಪೈಲ್ವಾನ್ ಚಿತ್ರದ ಆಡಿಯೋ ಯಾವಾಗ ಎಂಬ ಕುತೂಹಲ ಕಾಡ್ತಿದೆ. ಅಷ್ಟರಲ್ಲೇ ಪೈಲ್ವಾನ್ ಚಿತ್ರದ ಆಡಿಯೋ ಹಕ್ಕು ಖರೀದಿಸಿರುವ ಬಗ್ಗೆ ಲಹರಿ ಮ್ಯೂಸಿಕ್ ಸಂಸ್ಥೆ ಮಾಹಿತಿ ನೀಡಿದೆ.