ಅಪರೇಷನ್ ಕಮಲ ಮತ್ತು ಕೇಂದ್ರ ಬಜೆಟ್ ವಿಚಾರ: ನೋ ರಿಯಾಕ್ಷನ್ ಎಂದ ಸಚಿವ ಹೆಚ್.ಡಿ ರೇವಣ್ಣ… ಹಾಸನ,ಜು,5,2019(..): ಅಪರೇಷನ್ ಕಮಲ ವಿಚಾರ ಮತ್ತು ಇಂದು ಮಂಡನೆಯಾದ ಕೇಂದ್ರ ಬಜೆಟ್ ಕುರಿತು ಪ್ರತಿಕ್ರಿಯಿಸಿಲು ಲೋಕೋಪಯೋಗಿ ಸಚಿವ ಹೆಚ್.ಡಿ ರೇವಣ್ಣ ನಿರಾಕರಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ನೋ ರಿಯಾಕ್ಷನ್ ಎಂದ ಸಚಿವ ಎಚ್.ಡಿ.ರೇವಣ್ಣ, ಆಪರೇಷನ್ ಕಮಲದ ಬಗ್ಗೆ ಮಾತನಾಡುವ ದೊಡ್ಡ ವ್ಯಕ್ತಿ ನಾನಲ್ಲ. ನಾವು ಅಭಿವೃದ್ಧಿ ಬಗ್ಗೆ ಚಿಂತಿಸಲಾಗುವುದು. ಮುಂಬರುವ ದಸರಾ ಮಹೋತ್ಸವ ಸಜ್ಜುಗೊಳಿಸಲು ಮುಂದಾಗಿದ್ದೀವಿ ಎಂದು ಪ್ರತಿಕ್ರಿಯೆ ನೀಡಿದರು. ಮೈಸೂರು-ಬೆಂಗಳೂರು ದಶಪಥ ರಸ್ತೆ ನಿರ್ಮಾಣಕ್ಕೆ ಶೇ.90 ಭೂಮಿ ವಶಪಡಿಸಿಕೊಳ್ಳಲಾಗಿದೆ‌. ಈಗಾಗಾಲೇ ಬೆಂಗಳೂರಿನಿಂದ ನಿಡುಗಟ್ಟದವರೆಗೆ ಕಾಮಗಾರಿ ನಡೆಯುತ್ತಿದೆ.ಮುಂದಿನ ದಿನಗಳಲ್ಲಿ ಮೈಸೂರಿನಿಂದ ಕಾಮಗಾರಿ ಆರಂಭಿಸಲಾಗುವುದು. ಕೇಂದ್ರ ಸರ್ಕಾರ ಸಹ ಈ ಯೋಜನೆಗೆ ಹಣ ಮಂಜೂರು ಮಾಡಿದೆ ಆದಷ್ಟು ಶೀಘ್ರದಲ್ಲಿ ಪೂರ್ಣಗೊಳಿಸಲಾಗುವುದು ಎಂದರು. ಕೇಂದ್ರ ಬಜೆಟ್ ನಾನು ನೋಡಿಲ್ಲ ನೋಡದೇ ಹೇಳುವುದಿಲ್ಲ ಎಂದು ಸಚಿವ ಹೆಚ್.ಡಿ ರೇವಣ್ಣ ನುಡಿದರು. : - - - -