ಹದ್ದಗೆಟ್ಟ ರಸ್ತೆ, ಸಂಚರಿಸಲಾಗದೆ ಮಧ್ಯದಲ್ಲಿ ನಿಂದ ಸರ್ಕಾರಿ ಬಸ್: ಜನಪ್ರತಿನಿಧಿಗಳ ವಿರುದ್ದ ಆಕ್ರೋಶ… ಬೆಳಗಾವಿ,ಜು,4,2019(..): ರಸ್ತೆ ಹದಗೆಟ್ಟ ಹಿನ್ನೆಲೆ ಸರ್ಕಾರಿ ಬಸ್ ಸಂಚರಿಸಲಾಗದೆ ರಸ್ತೆ ಮಧ್ಯದಲ್ಲಿ ನಿಂತು ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಗಿರಿಯಾಲ ಗ್ರಾಮದ ಈ ಘಟನೆ ನಡೆದಿದೆ. ಗಿರಿಯಾಲ ಮತ್ತು ಚಿಕ್ಕಬಾಗೇವಾಡಿ ಸಂಪರ್ಕಿಸುವ ರಸ್ತೆ ಸಂಪೂರ್ಣ ಹಾಳಾಗಿದ್ದು, ಹದಗೆಟ್ಟ ರಸ್ತೆ ಮಳೆಗೆ ಇನ್ನೂಷ್ಟು ಹಾಳಾಗಿದೆ. ಈ ನಡುವೆ ಬಸ್ ನಡುರಸ್ತೆಯಲ್ಲಿ ಕೈಕೊಟ್ಟದಿಂದ ವಿದ್ಯಾರ್ಥಿಗಳು, ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು. ಬಸ್ ಪ್ರಯಾಣಿಕರು ಬೈಕ್ ಮೂಲಕ ತಮ್ಮ ಊರು ತಲುಪಿದರು. ರಸ್ತೆ ಹದಗೆಟ್ಟಿರುವ ಹಿನ್ನೆಲೆ ರಸ್ತೆ ದುಯರಸ್ತಿ ಮಾಡಿಸದ ಜನಪ್ರತಿನಿಧಿಗಳು ಗ್ರಾಮ ಪಂಚಾಯತಿ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. : – – - - –-