ರಶ್ಮಿಕಾ ಮಂದಣ್ಣಗೆ ಜಾಕ್’ಪಾಟ್ ! ಇಳಯದಳಪತಿ ವಿಜಯ್ ಚಿತ್ರಕ್ಕೆ ಆಯ್ಕೆ ಮುಂಬೈ, ಜುಲೈ 07, 2019 (..): ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಲಕ್ ಬದಲಾಗಿದೆ ! ರಶ್ಮಿಕಾ ಈಗ ವಿಜಯ್ ಸಿನಿಮಾಗೆ ನಾಯಕಿಯಾಗುತ್ತಿದ್ದಾರೆ. ವಿಜಯ್ ಅವರರ ಮುಂದಿನ ಚಿತ್ರಕ್ಕೆ ರಾಶಿ ಖನ್ನಾ ಮತ್ತು ರಶ್ಮಿಕಾ ನಾಯಕಿಯರಾಗಲಿದ್ದಾರೆ. ಲೋಕೇಶ್ ಕನಗರಾಜ್ ತಳಪತಿ 64 ಸಿನಿಮಾದಲ್ಲಿ ರಶ್ಮಿಕಾ ಪಾತ್ರ ಮಾಡಲಿದ್ದಾರೆ ಎಂಬ ಸುದ್ದಿ ಬಂದಿದೆ. ಈ ಮೂಲಕ ರಶ್ಮಿಕಾಗೆ ತಮಿಳು ಇಳಯದಳಪತಿಗೆ ನಾಯಕಿಯಾಗುವ ಅದೃಷ್ಟ ಕೂಡಿಬಂದಿದೆ.