ಈ ವಾರ ವೀಕೆಂಡ್ ವಿತ್ ರಮೇಶ್ ಜೊತೆ ಕಂಬಾರರ ಕಥೆ ! ಬೆಂಗಳೂರು, ಜುಲೈ 07, 2019 (..): ಈ ವಾರ ಮತ್ತೆ ವೀಕೆಂಡ್ ವಿತ್ ರಮೇಶ್ ನಲ್ಲಿ ಸ್ಯಾಂಡಲ್ ವುಡ್ ಮತ್ತು ಸಾಹಿತ್ಯ ಲೋಕದ ಸಾಧಕರ ಸಮಾಗಮನವಾಗಿದೆ. ಈ ವಾರ ಸ್ಯಾಂಡಲ್ ವುಡ್ ಯಶಸ್ವಿ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಮತ್ತು ಸಾಹಿತಿ ಚಂದ್ರಶೇಖರ ಕಂಬಾರರು ಸಾಧಕರ ಸೀಟ್’ನಲ್ಲಿ ಕೂರಲಿದ್ದಾರೆ. ಬಂಧನ, ಮುತ್ತಿನ ಹಾರ, ಹಿಮಪಾತದಂತಹ ಸಾಕಷ್ಟು ಹಿಟ್ ಚಿತ್ರಗಳನ್ನು ಕೊಟ್ಟ, ಮಹಾನ್ ನಟರಿಗೆ ನಿರ್ದೇಶಕರಾದ ರಾಜೇಂದ್ರ ಸಿಂಗ್ ಬಾಬು ಜೀವನಗಾಥೆಯನ್ನು ಈ ಶನಿವಾರ ಕೇಳಬಹುದು. ಭಾನುವಾರ ಕಂಬಾರರ ಕತೆ ಕೇಳಬಹುದು.