ಶೌಚಾಲಯ ಸ್ವಚ್ಛತೆ ಕಾಪಾಡದಿದ್ದಕ್ಕೆ ಅಧಿಕಾರಿಗಳಿಗೆ ನಿಂದಿಸಿದ ಶಾಸಕ ನಾಗೇಂದ್ರ… ಮೈಸೂರು,ಜು,3,2019(..): ಶೌಚಾಲಯ ಸ್ವಚ್ಛತೆ ಕಾಪಾಡದಿದ್ದಕ್ಕೆ ಮೈಸೂರಿನ ಚಾಮರಾಜ ಕ್ಷೇತ್ರದ ಬಿಜೆಪಿ ಶಾಸಕ ನಾಗೇಂದ್ರ ಅವರು ಅಧಿಕಾರಿಗಳಿಗೆ ನಿಂದಿಸಿರುವ ಘಟನೆ ನಡೆದಿದೆ. ಇಂದು ಮೈಸೂರಿನ ಸಬರ್ಬ್ ಬಸ್ ನಿಲ್ದಾಣದ ಶೌಚಾಲಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ ದೇವೇಗೌಡರು ಹಾಗೂ ಶಾಸಕ ಎಲ್ ನಾಗೇಂದ್ರ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಶೌಚಾಲಯ ಸ್ವಚ್ಚವಾಗಿ ಇಡದಿದ್ದಕ್ಕೆ ಗರಂ ಆದ ಶಾಸಕ ನಾಗೇಂದ್ರ ಕಳ್ ನನ್ ಮಕ್ಕಳು ಅಧಿಕಾರಿಗಳು ನೆಟ್ಟಗೆ ಕೆಲಸ ಮಾಡಿದ್ರೆ ಏಕೆ ಈಗಾಗುತ್ತಿತ್ತು ಎನ್ನು ಮೂಲಕ ಅಧಿಕಾರಿಗಳಿಗೆ ಕಳ್ ನನ್ ಮಕ್ಕಳು ಎಂದಿದ್ದಾರೆ. ಇದೇ ವೇಳೆ ಅಧಿಕಾರಿಗಳನ್ನ ಸಮರ್ಥಿಸಿಕೊಳ್ಳಲು ಮುಂದಾದ ಬಿಜೆಪಿ ಪಾಲಿಕೆ ಸದಸ್ಯ ಸತೀಶ್ ಅವರನ್ನೂ ತರಾಟೆಗೆ ತೆಗೆದುಕೊಂಡ ಶಾಸಕ ನಾಗೇಂದ್ರ, ನೀವು ಸುಮ್ನಿರಿ. ಅಧಿಕಾರಿಗಳನ್ನ ಏಕೆ ಸಮರ್ಥಿಸಿಕೊಳ್ಳುತ್ತಿರಿ ಎಂದು ಹೇಳಿದರು. ಇದೇ ಸಮಯದಲ್ಲಿ ಸಚಿವ ಜಿ.ಟಿ ದೇವೇಗೌಡ , ಇಂಜಿನಿಯರ್ ಮತ್ತು ಗುತ್ತಿಗೆದಾರರಿಗೆ ತರಾಟೆ ತೆಗೆದುಕೊಂಡರು. : - –-- –-