ವಿಶ್ವಕಪ್ ಕ್ರಿಕೆಟ್ 2019: ನಾಲ್ಕನೇ ಬಾರಿಗೆ ಭರ್ಜರಿ ಶತಕ ಸಿಡಿಸಿದ ರೋಹಿತ್ ಶರ್ಮಾ… ಬರ್ಮಿಂಗ್ ಹ್ಯಾಮ್,ಜು,2,2019(..): ಇಂದು ನಡೆಯುತ್ತಿರುವ ಬಾಂಗ್ಲಾದೇಶದ ವಿರುದ್ದದ ಪಂದ್ಯದಲ್ಲಿ ಭಾರತ ತಂಡದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಶತಕ ಸಿಡಿಸುವ ಮೂಲಕ 2019ರ ವಿಶ್ವಕಪ್ ಕ್ರಿಕೆಟ್ ನಲ್ಲಿ ನಾಲ್ಕನೇ ಶತಕ ದಾಖಲಿಸಿದ್ದಾರೆ. ಇಂಗ್ಲೇಂಡ್ ನ ಬರ್ಮಿಂಗ್ ಹ್ಯಾಮ್ ನಲ್ಲಿ ಭಾರತ ಮತ್ತು ಬಾಂಗ್ಲಾದೇಶದ ನಡುವೆ ಪಂದ್ಯ ನಡೆಯುತ್ತಿದ್ದು ಟೀಂ ಇಂಡಿಯಾ ಮೊದಲ ಬ್ಯಾಟಿಂಗ್ ನಡೆಸುತ್ತಿದೆ. ಭಾರತದ ತಂಡದ ಪರವಾಗಿ ಆರಂಭಿಕ ಆಟಗಾರನಾಗಿ ಕಣಕ್ಕಿಳಿದಿದ್ದ ರೋಹಿತ್ ಶರ್ಮಾ ಭರ್ಜರಿ ಶತಕ ಸಿಡಿಸಿ ಔಟ್ ಆಗಿದ್ದಾರೆ. 92 ಬಾಲ್ ಗಳನ್ನ ಎದುರಿಸಿದ ರೋಹಿತ್ 104 ರನ್ ಸಿಡಿಸಿ ಸೌಮ್ಯ ಸರ್ಕಾರ್ ಗೆ ವಿಕೆಟ್ ಒಪ್ಪಿಸಿದರು. ಸದ್ಯ ಭಾರತ ತಂಡದ ಸ್ಕೋರ್ 31 ಓವರ್ ಗೆ ಒಂದು ವಿಕೆಟ್ ನಷ್ಟಕ್ಕೆ 184 ರನ್. ಕೆ.ಎಲ್ ರಾಹುಲ್ 74 ಬಾರಿಸಿದ್ದು ರಾಹುಲ್ ಜತೆಗೆ ವಿರಾಟ್ ಕೊಹ್ಲಿ ಸ್ಕ್ರೀಜ್ ನಲ್ಲಿದ್ದಾರೆ. : ೨೦೧೯- – --