ವರಮಹಾಲಕ್ಷ್ಮೀ ಹಬ್ಬಕ್ಕೆ ತೆರೆ ಮೇಲೆ ಡಿ ಬಾಸ್ ‘ಕುರುಕ್ಷೇತ್ರ’ ಬೆಂಗಳೂರು, ಜುಲೈ 02, 2019 (..): ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಸಿನಿಮಾ ‘ಕುರುಕ್ಷೇತ್ರ’ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದೆ. ಎಲ್ಲ ಅಡೆ ತಡೆಗಳನ್ನು ಮೀರಿ ಕುರುಕ್ಷೇತ್ರ ತೆರೆ ಮೇಲೆ ಬರಲು ದಿನಾಂಕ ನಿಗದಿಯಾಗಿದೆ. ರಿಲೀಸ್ ಗೆ ತಯಾರಿಗಳನ್ನು ಮಾಡಿಕೊಳ್ಳುತ್ತಿರುವ ‘ಕುರುಕ್ಷೇತ್ರ’ ತಂಡ ಮೊದಲು ಆಡಿಯೋ ಮೂಲಕ ಅಭಿಮಾನಿಗಳ ಮುಂದೆ ತರುತ್ತಿದೆ. ಆಗಸ್ಟ್ ನಲ್ಲಿ ಅಂದ್ರೆ ವರಮಹಾಲಕ್ಷ್ಮಿ ಹಬ್ಬದ ದಿನ ಚಿತ್ರ ದೇಶದಾದ್ಯಂತ ತೆರೆಗೆ ಬರುತ್ತಿದೆ. ಅಂತೂ ಆ ಶುಭ ಘಳಿಗೆ ಬಂತು ಎಂದು ದಚ್ಚು ಅಭಿಮಾನಿಗಳು ಸಂತಸ ಪಡುತ್ತಿದ್ದಾರೆ. ಯಾವುದೆ ಕಾರಣಕ್ಕೂ ಚಿತ್ರದ ರಿಲೀಸ್ ಡೇಟ್ ಬದಲಾಗುವುದಿಲ್ಲ ಎಂದು ನಿರ್ಮಾಪಕ ಮುನಿರತ್ನ ಹೇಳಿದ್ದಾರೆ.