ಅತೃಪ್ತರ ಗುಂಪಿನಿಂದ ನಮ್ಮ ಹೆಸರು ತೆಗೆದು ಹಾಕಿ-ಮಾಧ್ಯಮಗಳಿಗೆ ‘ಕೈ’ ಶಾಸಕರಿಂದ ಮನವಿ… ಬೆಂಗಳೂರು,ಜು,1,2019(..): ಕಾಂಗ್ರೆಸ್ ಶಾಸಕರಾದ ಆನಂದ್ ಸಿಂಗ್ ಮತ್ತು ರಮೇಶ್ ಜಾರಕಿಹೊಳಿ ಇಂದು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಇನ್ನು ಅತೃಪ್ತಗೊಂಡಿರುವ ಶಾಸಕರು ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಅತೃಪ್ತರ ಗುಂಪಿನಲ್ಲಿ ತಮ್ಮ ಹೆಸರು ಕೇಳಿ ಬಂದಿರುವ ಹಿನ್ನೆಲೆ ಆ ಗುಂಪನಿಂದ ತಮ್ಮ ಹೆಸರನ್ನ ತೆಗೆದು ಹಾಕುವಂತೆ ಮಾಧ್ಯಮದವರಿಗೆ ಕೈ ಶಾಸಕರಾದ ಭೀಮಾನಾಯ್ಕ್ , ಪ್ರತಾಪ್ ಗೌಡ ಪಾಟೀಲ್ ಮತ್ತು ಅಮರೇಗೌಡ ಬಯ್ಯಪುರ ಮನವಿ ಮಾಡಿದ್ದಾರೆ. ಈ ಬಗ್ಗೆ ಮಾಧ್ಯಮದ ಜತೆ ಮಾತನಾಡಿರುವ ಮೂವರು ಶಾಸಕರು, ನಾವು ಕಾಂಗ್ರೆಸ್ ಪಕ್ಷದಲ್ಲೇ ಇರ್ತೇವೆ. ಅತೃಪ್ತರ ಗುಂಪಿನಿಂದ ನಮ್ಮ ಹೆಸರನ್ನ ತೆಗೆದು ಹಾಕಿ. ನಾವು ಬಿಜೆಪಿಗೆ ಹೋಗುವ ಅನಿವಾರ್ಯತೆ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇದಕ್ಕೂ ಮುನ್ನ ಟ್ವಿಟ್ಟರ್ ನಲ್ಲಿ ಟ್ವಿಟ್ ಮಾಡಿದ್ದ ಶಾಸಕ ಭೀಮನಾಯ್ಕ್ , ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡ್ತಿಲ್ಲ. ರಾಜೀನಾಮೆ ನೀಡ್ತೇನೆ ಅನ್ನೊದು ಸುಳ್ಳು ಸುದ್ದಿ. ನಾನು ಕಾಂಗ್ರೆಸ್ ಸಿದ್ಧಾಂತ ಒಪ್ಪಿಕೊಂಡವನು. ಈ ರೀತಿಯ ನಿರಾಧಾರ ಸುದ್ದಿ ಯಾರು ನಂಬಬೇಡಿ. ಸುದ್ಧಿ ಪ್ರಕಟಿಸುವ ಮುನ್ನ ಮಾಧ್ಯಮದವರು ದೃಢಪಡಿಸಿಕೊಳ್ಳಿ ಎಂದು ಟ್ವಿಟ್ ಮಾಡಿದ್ದರು. : - – – - -