ಮೆಗಾಸ್ಟಾರ್ ಚಿರಂಜೀವಿ ‘ ಸೈರಾ ನರಸಿಂಹ ರೆಡ್ಡಿ’ ಕರ್ನಾಟಕದ ಮಾರಾಟ ಹಕ್ಕು 32 ಕೋಟಿ ರೂ.ಗೆ ಮಾರಾಟ ಬೆಂಗಳೂರು, ಜುಲೈ 01, 2019 (..):ಮೆಗಾಸ್ಟಾರ್ ಚಿರಂಜೀವಿ ಅಭಿನಯಿಸುತ್ತಿರುವ 151 ನೇ ಸಿನಿಮ’ ಸೈರಾ ನರಸಿಂಹ ರೆಡ್ಡಿ’ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ಇನ್ನು ಕಿಚ್ಚ ಸುದೀಪ್ ಫ್ಯಾನ್ಸ್ ಕೂಡ ಸಾಕಷ್ಟು ಎಕ್ಸೈಟ್ ಆಗಿದ್ದಾರೆ. 19 ನೇ ಶತಮಾನದ ಪಾಳೇಗಾರ ನರಸಿಂಹರೆಡ್ಡಿಯ ಅವತಾರದಲ್ಲಿ ಮೆಗಾಸ್ಟಾರ್ ಚಿರಂಜೀವಿ ನಟಿಸುತ್ತಿದ್ದಾರೆ. ಕಿಚ್ಚ ‘ಅವುಕು’ ಪ್ರಾಂತ್ಯದ ರಾಜನಾಗಿ ಸುದೀಪ್ ಕಾಣಿಸಿಕೊಳ್ಳಲಿದ್ದು, ಇದೊಂದು ಹೈ ಬಜೆಟ್ ಸಿನಿಮವಾಗಿದೆ. ಈಗಾಗಲೇ ಚಿತ್ರೀಕರಣ ಮುಗಿಸಿ ರಿಲೀಸ್ ಗೆ ಸಜ್ಜಾಗಿರುವ ಸೈರಾ ನರಸಿಂಹ ರೆಡ್ಡಿ ಚಿತ್ರದ ಬಗ್ಗೆ ಬ್ರೇಕಿಂಗ್ ಸುದ್ದಿ ಹೊರ ಬಿದ್ದಿದೆ. ಸೈರಾ ನರಸಿಂಹ ರೆಡ್ಡಿ ಸಿನಿಮಾದ ಕರ್ನಾಟಕ ವಿತರಣೆಯ ಹಕ್ಕು ಬರೋಬ್ಬರಿ 32 ಕೋಟಿಗೆ ಮಾರಾಟವಾಗಿ ದಾಖಲೆ ನಿರ್ಮಿಸಿದೆ. ಇದೇ ಮೊದಲು ತೆಲುಗು ಚಿತ್ರವೊಂದಕ್ಕೆ ಕರ್ನಾಟಕದಲ್ಲಿ ಇಷ್ಟು ದೊಡ್ಡ ಮೊತ್ತ ಕೊಟ್ಟು ವಿತರಣೆ ಹಕ್ಕು ಕೊಂಡುಕೊಳ್ಳಲಾಗಿದೆ.